ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .
ಬೀದರ ನ್ಯೂಸ್.
ಭಾಲ್ಕಿ ಸುದ್ದಿ:....
ಅಂಬೆಸಾಂಗವಿ, ಕೋಸಂ ಕೆರೆಗೆ ಶಾಸಕರಾದ ಶ್ರೀ ಈಶ್ವರ ಖಂಡ್ರೆಯವರು ಭೇಟಿ
ನರೇಗಾದಡಿ ಹೂಳೆತ್ತುವ ಕಾಮಗಾರಿ ಪರಿಶೀಲನೆ
ಭಾಲ್ಕಿ ತಾಲೂಕಿನ ಅಂಬೆಸಾಂಗವಿ ಹಾಗೂ ಕೋಸಂ ಗ್ರಾಮದ ಹೊರ ವಲಯದ ಕೆರೆಗಳಿಗೆ ಶಾಸಕರಾದ ಶ್ರೀ ಈಶ್ವರ ಖಂಡ್ರೆಯವರು ಭೇಟಿ ನೀಡಿ ನರೇಗಾದಡಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದರು
ಲಾಕ್ ಡೌನ್ ನಡುವೆ ಭಾನುವಾರ ಅಧಿಕಾರಿಗಳೊಂದಿಗೆ ಅಂಬೆಸಾಂಗವಿ, ಕೋಸಂ ಕೆರೆಗೆ ಭೇಟಿ ನೀಡಿದ ಶಾಸಕರು ಹೂಳೆತ್ತುವ ಕಾಮಗಾರಿ ವೀಕ್ಷಿಸಿ, ಕೂಲಿ ಕಾರ್ಮಿಕರ ಸಮಸ್ಯೆ ಆಲಿಸಿದರು
ಬಳಿಕ ಮಾತನಾಡಿದ ಅವರು, ಕೋವಿಡ್ ೧೯ ಸೋಂಕಿಗೆ ಇಡೀ ವಿಶ್ವವೇ ತಲ್ಲಣಗೊಂಡಿದೆ.
ಲಾಕ್ ಡೌನ್ ನಿಂದ ಬಡವರು, ಕೂಲಿ ಕಾರ್ಮಿಕರು ಇರುವ ಕೆಲಸ ಕಳೆದು ಕೊಂಡು ಸಂಕಷ್ಟದಲ್ಲಿ ದಿನ ದೂಡುತ್ತ ಪರಿವಾರ ಮುನ್ನಡೆಸುವುದು ಕೂಡ ಕಷ್ಟವಾಗುತ್ತಿರುವುದು ಗಮನಕ್ಕೆ ಬಂದಿದೆ
ಇಂತಹ ಸಂದರ್ಭದಲ್ಲಿ ಯಾರೊಬ್ಬರು ಆತಂಕ ಪಡಬೇಕಿಲ್ಲ ನಾನು ನಿಮ್ಮಂದಿಗೆ ಇದ್ದೇನೆ ಎಂದು ಧೈರ್ಯ ತುಂಬಿದರು
ಸಂಕಷ್ಟ ಸಮಯದಲ್ಲಿ ಬಡವರು, ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂಬ ಉದ್ದೇಶದೊಂದಿಗೆ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾದಡಿ ಕೆಲಸ ನೀಡುವಂತೆ ಸೂಚನೆ ನೀಡಿದ್ದೇನೆ. ಒಂದು ಪರಿವಾರಕ್ಕೆ ಕನಿಷ್ಟ ೨೫ ದಿವಸ ಕೆಲಸ ಸಿಗಲಿದೆ. ದಿನವೊಂದಕ್ಕೆ ಒಬ್ಬರಿಗೆ ೨೭೫ ರೂ ಕೂಲಿ ಸಿಗಲಿದ್ದು ವಾರದೊಳಗೆ ಕೂಲಿ ಹಣ ನೇರವಾಗಿ ಕಾರ್ಮಿಕರ ಖಾತೆಗೆ ಜಮಾ ಆಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ ಅವರು ಕೂಲಿ ಕೆಲಸ ಸಮಯದಲ್ಲಿ ಕಾರ್ಮಿಕರಿಗೆ ಕುಡಿವ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು
ಈ ಸಂದರ್ಭದಲ್ಲಿ ತಹಸೀಲ್ದಾರ ಅಣ್ಣಾರಾವ ಪಾಟೀಲ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ನಾಯಕರ್ ಇದ್ದರು.
ವರದಿಗಾರರು....
ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments
Post a Comment