Posts

Showing posts from April, 2020

ಕೋನಮೇಳಕುಂದಾ. ಧನ್ನೂರದಲ್ಲಿ ನರೇಗಾದಡಿ ಕಾಮಗಾರಿ ವೀಕ್ಷಿಸಿದ ಶಾಸಕರು ಈಶ್ವರ ಖಂಡ್ರೆ.

Image
ಬೀದರ ನ್ಯೂಸ್.. ಭಾಲ್ಕಿ ಸುದ್ದಿ:...... ಕೋನಮೇಳಕುಂದಾ, ಧನ್ನೂರಾದಲ್ಲಿ ನರೇಗಾದಡಿ ಕಾಮಗಾರಿ ವೀಕ್ಷಿಸಿದ ಶಾಸಕ ಖಂಡ್ರೆ ಲಾಕ್ ಡೌನ್ ಸಂಕಷ್ಟದಲ್ಲಿರುವ ದುಡಿವ ಕೈಗಳಿಗೆ  ಕನಿಷ್ಟ ೨೦೦ ದಿನ ಕೆಲಸ ನೀಡಲು ಸರಕಾರಕ್ಕೆ ಒತ್ತಾಯ ಭಾಲ್ಕಿ ಲಾಕ್ ಡೌನ್ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ನರೇಗಾದಡಿ ಒಂದು ಪರಿವಾರಕ್ಕೆ ಕನಿಷ್ಟ ೨೦೦ ದಿವಸ ಕೆಲಸ ನೀಡಬೇಕು ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಾಸಕರಾದ ಶ್ರೀ ಈಶ್ವರ ಖಂಡ್ರೆಅವರು ಒತ್ತಾಯಿಸಿದ್ದಾರೆ ತಾಲೂಕಿನ ಕೋನ ಮೇಳಕುಂದಾ ಹಾಗೂ ಧನ್ನೂರು(ಹೆಚ್) ಗ್ರಾಮಗಳ ಹೊರ ವಲಯದಲ್ಲಿ ನರೇಗಾದಡಿ ನಡೆಯುತ್ತಿರುವ ಕಾಮಗಾರಿ ಸೋಮವಾರ ವೀಕ್ಷಿಸಿ ಮಾತನಾಡಿದರು. ಕೋವಿಡ್ ೧೯ ತಡೆಗೆ ಸರಕಾರ ಹೊರಡಿಸುವ ಲಾಕ್ ಡೌನ್ ನಿಂದ ಕಳೆದ ೩೫ ದಿವಸಗಳಿಂದ ಬಡವರು, ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊತ್ತಿನ ಊಟಕ್ಕೆ ತೊಂದರೆ ಅನುಭವಿಸುಂತಹ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ವೈಯಕ್ತಿಕವಾಗಿ ನಾನು ಹಾಗೂ ನಮ್ಮ ಬೆಂಬಲಿಗರು, ಅಭಿಮಾನಿಗಳು ಸೇರಿ ಅಗತ್ಯ ಇರುವ ಕಡೆಗಳಲ್ಲಿ ಆಹಾರದ ಪೊಟ್ಟಣ, ತರಕಾರಿ ಕಿಟ್, ಮಾಸ್ಕ್ ಸೇರಿ ಪಡಿತರ ಹಾಗೂ ಪಡಿತರ ರಹಿತ ಫಲಾನುಭವಿಗಳಿಗೆ ಎರಡು ತಿಂಗಳ ಮುಂಗಡ ಪಡಿತರ ನೀಡುವುದು ಸೇರಿದಂತೆ ಇತ್ಯಾದಿ ಅಗತ್ಯ ಸೌಲಭ್ಯ ನೀಡಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು ಲಾಕ್ ಡೌನ್ ನಿಂದ ಕೆಲಸ ಕಳೆದು ಕೊಂಡು ಆರ್ಥಿಕವಾಗಿ ಸಮಸ್ಯ...

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .

ಬೀದರ ನ್ಯೂಸ್. ಭಾಲ್ಕಿ ಸುದ್ದಿ:.... ಅಂಬೆಸಾಂಗವಿ, ಕೋಸಂ ಕೆರೆಗೆ ಶಾಸಕರಾದ ಶ್ರೀ ಈಶ್ವರ ಖಂಡ್ರೆಯವರು ಭೇಟಿ ನರೇಗಾದಡಿ ಹೂಳೆತ್ತುವ ಕಾಮಗಾರಿ ಪರಿಶೀಲನೆ ಭಾಲ್ಕಿ ತಾಲೂಕಿನ ಅಂಬೆಸಾಂಗವಿ ಹಾಗೂ ಕೋಸಂ ಗ್ರಾಮದ ಹೊರ ವಲಯದ ಕೆರೆಗಳಿಗೆ ಶಾಸಕರಾದ ಶ್ರೀ ಈಶ್ವರ ಖಂಡ್ರೆಯವರು ಭೇಟಿ ನೀಡಿ ನರೇಗಾದಡಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದರು ಲಾಕ್ ಡೌನ್ ನಡುವೆ ಭಾನುವಾರ ಅಧಿಕಾರಿಗಳೊಂದಿಗೆ ಅಂಬೆಸಾಂಗವಿ, ಕೋಸಂ ಕೆರೆಗೆ ಭೇಟಿ ನೀಡಿದ ಶಾಸಕರು ಹೂಳೆತ್ತುವ ಕಾಮಗಾರಿ ವೀಕ್ಷಿಸಿ, ಕೂಲಿ ಕಾರ್ಮಿಕರ ಸಮಸ್ಯೆ ಆಲಿಸಿದರು ಬಳಿಕ ಮಾತನಾಡಿದ ಅವರು, ಕೋವಿಡ್ ೧೯ ಸೋಂಕಿಗೆ ಇಡೀ ವಿಶ್ವವೇ ತಲ್ಲಣಗೊಂಡಿದೆ. ಲಾಕ್ ಡೌನ್ ನಿಂದ ಬಡವರು, ಕೂಲಿ ಕಾರ್ಮಿಕರು ಇರುವ ಕೆಲಸ ಕಳೆದು ಕೊಂಡು ಸಂಕಷ್ಟದಲ್ಲಿ ದಿನ ದೂಡುತ್ತ ಪರಿವಾರ ಮುನ್ನಡೆಸುವುದು ಕೂಡ ಕಷ್ಟವಾಗುತ್ತಿರುವುದು ಗಮನಕ್ಕೆ ಬಂದಿದೆ ಇಂತಹ ಸಂದರ್ಭದಲ್ಲಿ ಯಾರೊಬ್ಬರು ಆತಂಕ ಪಡಬೇಕಿಲ್ಲ ನಾನು ನಿಮ್ಮಂದಿಗೆ ಇದ್ದೇನೆ ಎಂದು ಧೈರ್ಯ ತುಂಬಿದರು ಸಂಕಷ್ಟ ಸಮಯದಲ್ಲಿ ಬಡವರು, ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂಬ ಉದ್ದೇಶದೊಂದಿಗೆ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾದಡಿ ಕೆಲಸ ನೀಡುವಂತೆ ಸೂಚನೆ ನೀಡಿದ್ದೇನೆ. ಒಂದು ಪರಿವಾರಕ್ಕೆ ಕನಿಷ್ಟ ೨೫ ದಿವಸ ಕೆಲಸ ಸಿಗಲಿದೆ. ದಿನವೊಂದಕ್ಕೆ ಒಬ್ಬರಿಗೆ ೨೭೫ ರೂ ಕೂಲಿ ಸಿಗಲಿದ್ದು ವಾರದೊಳಗೆ ಕೂಲಿ ಹಣ ನೇರವಾಗಿ ಕಾರ್ಮಿಕರ ಖಾತೆಗೆ ಜಮಾ...

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

Image
ಬೀದರ ನ್ಯೂಸ್... ಭಾಲ್ಕಿ ಸುದ್ದಿ:.... *ಭಾಲ್ಕಿ ತಾಲೂಕಿನ ಉಚ್ಛಾ, ಮೊರಂಬಿ ಗ್ರಾಮಗಳಲ್ಲಿ ನರೇಗಾದಡಿ ಕಾಮಗಾರಿ ಪರಿಶೀಲಿಸಿದ ಶಾಸಕ ಖಂಡ್ರೆ || ಒಬ್ಬರಿಗೆ ಕನಿಷ್ಟ ೨೫ ದಿವಸ ಕೆಲಸ ಕೊಡಿ* *೪೦ ಪಂಚಾಯಿತಿಗಳಲ್ಲಿ ನರೇಗಾದಡಿ ಕೆಲಸ ನೀಡಲು ಸೂಚನೆ* *ಭಾಲ್ಕಿ* ತಾಲೂಕಿನ ಉಚ್ಛಾ ಹಾಗೂ ಮೊರಂಬಿ ಗ್ರಾಮಗಳಿಗೆ *ಶಾಸಕ ಈಶ್ವರ ಖಂಡ್ರೆ ಭೇಟಿ ನೀಡಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಕಾಮಗಾರಿ ಪರಿಶೀಲಿಸಿದರು* ಶನಿವಾರ ಅಧಿಕಾರಿಗಳ ತಂಡದೊಂದಿಗೆ ಶಾಸಕರು ಉಚ್ಛಾ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿರುವ ಚೆಕ್ ಡ್ಯಾಮ ಹಾಗೂ ಮೊರಂಬಿ ಗ್ರಾಮದ ಕುಡಿವ ನೀರಿನ ಟ್ಯಾಂಕ್ ಸಮೀಪ ಗಿಡ ನೆಡಲು ತೊಡುತ್ತಿರುವ ತಗ್ಗುಗಳನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ಕೊರೊನಾ ಸೋಂಕು ಹರಡುವಿಕೆ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಬಡ ಜನರು, ಕೂಲಿ ಕಾರ್ಮಿಕರು ಕೆಲಸ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. *ಕ್ಷೇತ್ರದ ಬಡಜನರಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎನ್ನುವ ಉದ್ದೇಶದಿಂದ ಈಗಾಗಲೇ ವೈಯಕ್ತಿಕವಾಗಿ ನಾನು ಹಾಗೂ ನಮ್ಮ ಬೆಂಬಲಿಗರು ಆಹಾರದ ಪೊಟ್ಟಣ, ತರಕಾರಿ ಕಿಟ್ ನೀಡುವ ಮೂಲಕ ನೆರವಿಗೆ ಧಾವಿಸಲಾಗಿದೆ* ಪಡಿತರ ಕಾರ್ಡ್ ಹೊಂದಿದ ಎಲ್ಲ ಫಲಾನುಭವಿಗಳು, ಕಾರ್ಡ್ ರಹಿತ ಎಲ್ಲ ಜನರಿಗೂ ಎರಡು ತಿಂಗಳ ಪಡಿತರ ಮುಂಗಡವಾಗಿ ನೀಡಲು ಕ್ರಮ ಜರುಗಿಸಲಾಗಿದೆ. *ಜತೆಗೆ ಬಡವರು, ಕೂಲಿ ಕಾ...

ಶಾಸಕರಾದ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ತುರ್ತು ಸಭೆ.ಭಾಲ್ಕಿ ಐದು ಸಾವಿರ ಮಾಸ್ಕ್ ವಿತರಣೆ

ಬೀದರ ನ್ಯೂಸ್... ಭಾಲ್ಕಿ ಸುದ್ದಿ:...... ಶಾಸಕರಾದ ಶ್ರೀ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ತುರ್ತು ಸಭೆ || ೫ ಸಾವಿರ ಮಾಸ್ಕ್, ೧೦೦ಲೀ ಸಾನಿಟೈಸರ್ ಖರೀದಿಗೆ ಸೂಚನೆ ಶಂಕಿತರ ದ್ರವ ಮಾದರಿ ಪರೀಕ್ಷೆಗೆ ವಿಳಂಬ ಬೇಡ ಭಾಲ್ಕಿ ತಾಲೂಕಿನ ವ್ಯಾಪ್ತಿಯಲ್ಲಿ ಕೋವಿಡ್ ೧೯ ತಡೆಗೆ ನಾನಾ ಹಂತದಲ್ಲಿ ಸಾಕಷ್ಟು ಮುಂಜಾಗ್ರತೆ ಕ್ರಮ ವಹಿಸಿದರ ಪರಿಣಾಮ ಇದು ವರೆಗೂ ಯಾವುದೇ ಪಾಸಿಜಿಟಿವ್ ಪ್ರಕರಣಗಳು ಕಂಡು ಬರದಿರುವುದು ಸಮಾಧಾನ ತಂದಿದೆ ಎಂದು ಶಾಸಕರಾದ ಶ್ರೀ ಈಶ್ವರ ಖಂಡ್ರೆಯವರು ಹೇಳಿದರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿವ ನೀರು, ಬೆಳೆಹಾನಿ ಹಾಗೂ ಕೋವಿಡ್ ೧೯ ತಡೆ ಕುರಿತು ಶುಕ್ರವಾರ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಆಡಳಿತ, ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು ಸೇರಿದಂತೆ ಮುಂತಾದ ಇಲಾಖೆಗಳ ಅಧಿಕಾರಿಗಳ ಅವಿರತ ಸೇವೆಯ ಪರಿಣಾಮ ಕೋವಿಡ್ ೧೯ ನಿಯಂತ್ರಣದಲ್ಲಿದೆ. ಆದರೂ ಕೂಡ ಕೋವಿಡ್ ೧೯ ತಡೆಗೆ ಇನ್ನು ನಿರ್ದಿಷ್ಟ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಸಾಂಕ್ರಾಮಿಕ ರೋಗ ತಕ್ಷಣಕ್ಕೆ ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣವಿಲ್ಲ. ಇದು ಸೆಪ್ಟೆಂಬರ್ ಅಂತ್ಯದ ವರೆಗೂ ಮುಂದುವರೆಯುವ ಸಾಧ್ಯತೆ ಇರುವುದರಿಂದ ಎಲ್ಲ ಅಧಿಕಾರಿಗಳು ಇನ್ನಷ್ಟು ಎಚ್ಚರಿಕೆಯಿಂದ ಕೆಲಸ ಮಾಡಿ ಯಾವೊಂದು ಪ್ರಕರಣವೂ ಪಾಸಿಟಿವ್ ಬರದಂತೆ ನೋಡಿಕೊಳ್ಳಬೇಕು....

ಆಲೆಕಲ್ಲು ಮಳೆಗೆ ಹಾನಿಯಾದ ಬೆಳೆಗೆ ಪರಿಹಾರ ನೀಡುವ ಭರವಸೆ ಈಶ್ವರ ಖಂಡ್ರೆ ಕೆಪಿಸಿಸಿ ಕಾರ್ಯಧ್ಯಕ್ಷ ಖಂಡ್ರೆ .ರೈತರಿಗೆ ರಕ್ಷಣೆ

Image
ಬೀದರ ನ್ಯೂಸ್.. ಭಾಲ್ಕಿ ಸುದ್ದಿ:..... ತೇಲಗಾಂವ ಗ್ರಾಮದ ರೈತರ ಹೊಲಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಭೇಟಿ || ಆಲೆಕಲ್ಲು ಮಳೆಗೆ ಹಾನಿಯಾದ ಬೆಳೆಗೆ ಪರಿಹಾರ ನೀಡಲು ಸೂಚನೆ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ರೈತರ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಲು ಸರಕಾರಕ್ಕೆ ಒತ್ತಾಯ ಭಾಲ್ಕಿ ತಾಲೂಕಿನ ವ್ಯಾಪ್ತಿಯಲ್ಲಿ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ರೈತರ ಕೃಷಿ ಹಾಗೂ ತೋಟಗಾರಿಕೆ  ಬೆಳೆಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ ತಾಲೂಕಿನ ತೇಲಗಾಂವ ಗ್ರಾಮದ ವಂದನಾಬಾಯಿ ಗೋವಿಂದರಾವ ಪಾಟೀಲ್ ಎಂಬುವರ ಹೊಲ ಸೇರಿದಂತೆ ಮುಂತಾದ ಕಡೆಗಳಲ್ಲಿ ಮಂಗಳವಾರ ಭೇಟಿ ನೀಡಿ ಮಾತನಾಡಿದರು ಕೋವಿಡ್ ೧೯ ಸೋಂಕಿಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ಈ ಸೋಂಕು ನಿಯಂತ್ರಣಕ್ಕೆ ಇದು ವರೆಗೂ ನಿರ್ದಿಷ್ಟವಾದ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಈ ಮಹಾಮಾರಿ ರೋಗ ತಡೆಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಲಾಕ್ ಡೌನ್ ಆದೇಶ ಹೊರಡಿಸಿದ್ದು ಪ್ರತಿಪಕ್ಷಗಳು ಕೂಡ ಬೆಂಬಲಿಸಿವೆ. ಲಾಕ್ ಡೌನ್ ನಿಂದ ರೈತರು ಸಂಕಷ್ಷದ ನಡುವೆ ಜೀವನ ನಡೆಸುತ್ತಿದ್ದಾರೆ. ರೈತರು ಬೆಳೆದ ಕೃಷಿ, ತೋಟಗಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ದರ ಸಿಗದೇ ನಷ್ಟ ಅನುಭವಿಸುತ್ತಿದ್ದಾರೆ. ರೈತರು ಬೇವರು ಸುರಿಸಿ ಹೊಲದಲ್ಲಿ ಬೆಳೆದ ಬೆಳೆಗಳಿಗೆ ಯಾರು ಕೇಳುವರು ...

ಬೀರಿ (ರಿ) ಆರೋಗ್ಯ ಕೇಂದ್ರಕ್ಕೆ ಈಶ್ವರ ಖಂಡ್ರೆ ಶಾಸಕರು ಭೇಟಿ ಆಶಾ ಕಾರ್ಯಕರ್ತೆಯವರಿಗೆ ದವಸ ಧಾನ್ಯ ವಿತರಣೆ

Image
ಬೀದರ ನ್ಯೂಸ್.. ಭಾಲ್ಕಿ ಸುದ್ದಿ.... ಬೀರಿ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ  ಶಾಸಕರಾದ ಶ್ರೀ ಈಶ್ವರ್ ಖಂಡ್ರೆ ಭೇಟಿ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ವಿತರಣೆ ಕೊರೊನಾ ಹೋರಾಟದಲ್ಲಿ ವೈದ್ಯರ ಸೇವೆ ಅನನ್ಯ ಭಾಲ್ಕಿ ತಾಲೂಕಿನ ಬೀರಿ (ಬಿ) ಗ್ರಾಮಕ್ಕೆ ಶಾಸಕರಾದ  ಶ್ರೀ ಈಶ್ವರ ಖಂಡ್ರೆ ಭೇಟಿ ನೀಡಿ ಕೊರೊನಾ ಸೋಂಕು ನಿಯಂತ್ರಣದ ಕುರಿತು ಮಾಹಿತಿ ಕಲೆ ಹಾಕಿದರು. ಬೆಳಗ್ಗೆ ಬೀರಿ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕರು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿ, ಆಶಾ ಕಾರ್ಯಕರ್ತೆಯರಿಗೆ ವೈಯಕ್ತಿಕವಾಗಿ ಆಹಾರದ ಕಿಟ್ ವಿತರಿಸಿದರು. ಬಳಿಕ ಶಾಸಕರಾದ  ಶ್ರೀ ಈಶ್ವರ್ ಖಂಡ್ರೆ ಮಾತನಾಡಿ, ಮಹಾಮಾರಿ ಕೋವಿಡ್ ೧೯ ಸೋಂಕು ಎಲ್ಲರ ನಿದ್ರೆಗೆಡಿಸಿದೆ. ಇಂತಹ ಸಂದರ್ಭದಲ್ಲಿ ವೈದ್ಯರು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಮನೆ, ಮಕ್ಕಳನ್ನು ಬಿಟ್ಟು ಕೊರೊನಾ ಹೋರಾಟದಲ್ಲಿ ತೊಡಗಿಸಿಕೊಂಡಿರುವುದು ಅವಿಸ್ಮರಣೀಯ, ಅನನ್ಯವಾಗಿದೆ ಎಂದು ಬಣ್ಣಿಸಿದರು ಕೋವಿಡ್ ೧೯ ಸೋಂಕು ತಡೆಗೆ ಇದುವರೆಗೂ ನಿರ್ದಿಷ್ಟ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದರಿಂದ ಒಬ್ಬರಿಂದ ಮತ್ತೊಬ್ಬರಿಗೆ ತಗಲುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಹೊರ ಜಿಲ್ಲೆ, ರಾಜ್ಯಗಳಿಂದ ಬಂದ ಜನರ ಮಾಹಿತಿ ಕಲೆ ಹಾಕಿ ಕಾಲಕಾಲಕ್ಕೆ ಆರೋಗ್ಯ ತ...

ಭಾಲ್ಕಿ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮದ ಪರಿಶೀಲನೆ ಈಶ್ವರ ಖಂಡ್ರೆ

Image
ಬೀದರ ನ್ಯೂಸ್.. ಖಾನಾಪೂರ್ ಗೊಶಾಲೆ, ಪಿಹೆಚ್ ಸಿ ಸೇರಿ ನಾನಾ ಕಡೆ ಶಾಸಕ ಖಂಡ್ರೆ ಭೇಟಿ || ಲಾಕ್ ಡೌನ್ ಸ್ಥಿತಿಗತಿಯ ಅವಲೋಕನ ಜಾನುವಾರುಗಳಿಗೆ ಮೇವು, ನೀರಿನ ಕೊರತೆ ಆಗದಿರಲಿ ಭಾಲ್ಕಿ ಪಟ್ಟಣದ ತರಕಾರಿ ಸಂತೆ, ಗ್ರಾಮೀಣ ಭಾಗದಲ್ಲಿನ ನಾನಾ ಆರೋಗ್ಯ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಖಾನಾಪೂರ್ ಗೊಶಾಲೆಗೆ ಸೋಮವಾರ ಶಾಸಕ ಈಶ್ವರ ಖಂಡ್ರೆ ಭೇಟಿ ನೀಡಿ ಲಾಕ್ ಡೌನ್ ಸಂದರ್ಭದಲ್ಲಿನ ಸ್ಥಿತಿಗತಿ ಪರಿಶೀಲಿಸಿದರು ರೈತರು ಬೆಳೆದ ತರಕಾರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವ ವಿಷಯ ತಿಳಿದು ಬೆಳ್ಳಂಬೆಳ್ಳಗ್ಗೆ ಪಟ್ಟಣದ ಸತ್ಯನಿಕೇತನ ಆವರಣದಲ್ಲಿ ತಾತ್ಕಾಲಿಕವಾಗಿ ಆರಂಭಿಸಿರುವ ತರಕಾರಿ ಸಂತೆಗೆ ಭೇಟಿ ನೀಡಿ ನಾನಾ ಭಾಗಗಳಿಂದ ರೈತರು ತಂದಿರುವ ಎಲ್ಲ ಬಗೆಯ ತರಕಾರಿ ಶಾಸಕರು ಸ್ವಂತ ಹಣದಿಂದ ಖರೀದಿ ಮಾಡಿ ತರಕಾರಿ ಬೆಳೆದ ರೈತರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ ಎಂದು ಧೈರ್ಯ ತುಂಬಿದರು ಅಲ್ಲಿಂದ ಅಧಿಕಾರಿಗಳ ತಂಡದೊಂದಿಗೆ ಡೋಣಗಾಪೂರ, ಬೀರಿ(ಬಿ) ಪ್ರಾಥಮಿಕ ಆರೋಗ್ಯ ಕೇಂದ್ರ, ನಿಟ್ಟೂರ(ಬಿ) ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಹಾಗೂ ಹೊಂ ಕ್ವಾರಂಟೈನ್ ನಲ್ಲಿರುವ ಜನರ ಮಾಹಿತಿ ಪಡೆದು ಕೊಂಡು ಹೊರ ಜಿಲ್ಲೆ, ರಾಜ್ಯಗಳಿಂದ ಬಂದ ಜನರ ಮೇಲೆ ನಿಗಾಯಿಡಬೇಕು. ಹಾಗೂ ಹೊಂ ಕ್ವಾರಂಟೈನ್ ಪೂರ್ಣಗೊಳಿಸಿದ ಜನರ ಮೇಲೂ ಕೂಡಾ ತೀವ್ರ ನಿಗಾ ಇರಿಸಬೇಕು ಎಂದರು. ಆಸ್ಪತ್ರೆಗಳಲ್ಲಿ ಔಷಧಿ, ಮಾಸ್ಕ...

ಕುಡಿಯುವ ನೀರಿಗಾಗಿ ಸಮಸ್ಯೆ ಗ್ರಾಮೀಣ ಪ್ರದೇಶ ಭಾಲ್ಕಿ ತಾಲ್ಲೂಕ ವರವಟ್ಟಿ ಬಿ ಗ್ರಾಮ

Image
ಬೀದರ ನ್ಯೂಸ್... ಭಾಲ್ಕಿ :- ತಾಲೂಕಿನ ವರವಟ್ಟಿ( ಬಿ) ಗ್ರಾಮದಲ್ಲಿ ಜೀವ ತೆಗೆಯುಕ್ಕೆ ಒಂದು ಕಡೆ ಕೊರೋನಾ ವೈರಸ್ ಹಿಂಬಾಲಿಸುತಿದೆ,  ಇನ್ನೊಂದು ಕಡೆ ಜೀವಂತ ಉಳಿಯಲು ನೀರಿಗಾಗಿ ಹುಡುಕಾಟದಲ್ಲಿ ಬಿಂದಿಗೆ ಸೈಕಲ್ ಗೆ ಕಟ್ಟಿ ಕೊಂಡು ಊರು ಸುತ್ತ ಬೇಕು ,ಗ್ರಾಮಸ್ಥರ ಸಂಕಷ್ಟಕ್ಕೆ ನೇರುವು ಆಗದ ಜನ ನಾಯಕರು, ಶಾಸಕರಾಗಿ ಮಂತ್ರಿ ಹುದ್ದೆ ಪಡೆದ್ದರು ಕುಡಿಯಲು ಕೊಡದ ಜನ ಇವರನ್ನು ಮತ್ತೆ ಓಟಗಳನ್ನು ಕಾಕಿ ಜನರು ಗೆಲ್ಲಿಸಬಹುದೆ, ?  ಪದೆ ಪದೆ ಆಯ್ಕೆ ಮಾಡಲಾಗುತ್ತದೆ ಆದರೆ ಜನರ ಸಮಸ್ಯೆಗಳನ್ನು ಜೀವಂತವಾಗಿ ಉಳಿದಿವೆ ಕಾರಣ ? ಮತದಾರರೆ ಒಂದು ಸಲ ಆಯ್ಕೆ ಮಾಡಿದ ವ್ಯಕ್ತಿ ಯನ್ನು ಕೇಲಸ ಮಾಡದೆ ಇದ್ದ ಸಂಧರ್ಭದಲ್ಲಿ ಮತ್ತೆ ಅದೇನೇ ವ್ಯಕ್ತಿ ಗೆ ಆಯ್ಕೆ ಮಾಡುವುದು ಸರಿಯಾದ ತಿರಮಾನ ಅಲ್ಲ,  ಸೂಕ್ತ ರೀತಿಯಲ್ಲಿ ಹೇಳುವುದಾದರೆ ಮತದಾರರೆ ನೀವು ತಪ್ಪು ಮಾಡುತ್ತಿದ್ದಿರಿ ಎಂಬರ್ಥ. ಬೀದರ ಜಿಲ್ಲೆಯಲ್ಲಿ ಕರೋನಾ ವ್ಯೆರಸ್ ತಡೆಗಟ್ಟಲು ಒಂದು ಕಡೆ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಅಧಿಕಾರಿಗಳು ಆದರೆ ಒಂದು ಕಡೆ ಪ್ರತಿಯೊಂದು ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ಸಮಸ್ಯೆ ದಿನೆ ದಿನೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದೆ.ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಮಟ್ಟಿಗೆ ಸಮಸ್ಯೆ ಜನರಿಗೆ ಕಾಡುತ್ತಿದ್ದೆ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಜನರ ಮಾತುಕತೆ ನಡೆಯುತ್ತಿದ್ದೆ. ವರದಿಗಾರರು...

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೀದರ ಘಟಕ ವತಿಯಿಂದ ಪ್ರತಿಭೆಯ ಮಕ್ಕಳಿಗೆ ಅವಕಾಶ

ಬೀದರ ನ್ಯೂಸ್... ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬೀದರ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತು ಚಿಟಗುಪ್ಪ ರವರ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ನಿಮಿತ್ತವಾಗಿ ವಿಧ್ಯಾರ್ಥಿಗಳಿಗೆ ಕವನ ಮತ್ತು ಪ್ರಬಂಧ ಬರೆಯುವ ವಿಶೇಷ ಸ್ವರ್ಧೆಗಳು ಹಮ್ಮಿಕೊಳ್ಳಲಾಗಿದೆ. *ಸ್ವರ್ಧೆ ವಿವರಗಳು ಹೀಗಿವೆ* 1)ಪ್ರೌಢಶಾಲೆ ವಿದ್ಯಾರ್ಥಿಗಳಿಗೆ  ಕವನದ ವಿಷಯ : ಕಾಯಕ.  ಪ್ರಬಂಧ ವಿಷಯ : ಬಸವಣ್ಣ ನವರ ಬದುಕು. 2)ಪದವಿ ಪೂರ್ವ ವಿದ್ಯಾರ್ಥಿಗಳಿಗೆ  ಕವನದ ವಿಷಯ : ವಚನ  ಪ್ರಬಂಧ ವಿಷಯ : ಬಸವಣ್ಣನವರ ವಿಚಾಧಾರೆಗಳು 3)ಪದವಿ ವಿಧ್ಯಾರ್ಥಿಗಳಿಗೆ  ಕವನದ ವಿಷಯ : ದಾಸೋಹ  ಪ್ರಬಂಧ ವಿಷಯ : ಬಸವಣ್ಣನವರ       ದಾಸೋಹ ಪರಿಕಲ್ಪನೆ ಆದರಿಂದ ಆಸಕ್ತ ವಿದ್ಯಾರ್ಥಿಗಳು ದಿನಾಂಕ 30-04-2020 ಒಳಗಾಗಿ  ಸದರಿ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ತಮ್ಮ ಕವನ,ಪ್ರಬಂಧಗಳು ಬರೆದು ಕೆಳಗೆ ಕೊಟ್ಟಿರುವ ವಾಟ್ಸಾಪ್ ನಂಬರಿಗೆ ಕಳುಹಿಸಲು ಕೋರಲಾಗಿದೆ. ಮೂರು ಹಂತಗಳಿಗೂ ಪ್ರಥಮ, ದ್ವಿತೀಯ ಮತ್ತು ತೃತೀಯ ಆಕರ್ಷಕ ಬಹುಮಾನ, ಪ್ರಶಸ್ತಿ ಪ್ರತ ನೀಡಲಾಗುತ್ತದೆ ಹಾಗೂ ಉತ್ತಮ ಬರಹಗಳಿಗೂ ಬಹುಮಾನ,ಪ್ರಮಾಣ ಪತ್ರ ನೀಡಲಾಗುವುದು. ತಮ್ಮ ವಿಶ್ವಾಸಿ ಶರಣ ಪ್ರೊ ಶಂಭು ಲಿಂಗ ವಿ ಕಾಮಣ್ಣ ಜಿಲ್ಲಾಧ್ಯಕ್ಷರು-9448585336. ಶರಣ ವೀರಣ್ಣಾ ಕುಂಬಾರ ಜಿಲ್ಲಾ ಗೌರವ ಸಲಹೆಗಾರರು -92427...

ಕರೋನಾ ವ್ಯೆರಸ್ ತಡೆಗಟ್ಟಲು ಜನರಿಗೆ ಜಾಗ್ರತಿ ಮೂಡಿಸುವ ಕಾರ್ಯ ಮಹೇಶ್ ಗೊರನಾಳ ಕರ್

Image
ಬೀದರ ನ್ಯೂಸ್... ಇಂದು ಗುಂಪಾ ರಸ್ತೆಯಲ್ಲಿರುವ ಹೀರೊ ಹೊಂಡಾ ಶೋ ರೂಮ್ ಎದುರಿಗೆ ಇರುವ ಗುಡಿಸಲುಗಳಿಗೆ ಭೆಟ್ಟಿ ನೀಡಿ ಕೊರೊನಾ ರೋಗದ  ಮುಂಜ್ರಾಗತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತ್ತು. ಗುಡಿಸಲು ನಿವಾಸಿಗಳು ಪಡಿತರ ಚೀಟಿ ಹೊಂದಿಲ್ಲ ಅನ್ನುವುದು ತಿಳಿದುಕೊಂಡು ಆಹಾರ ಪೊಟ್ಟಣ ಈಗಾಗಲೇ ನಗರ ಸಭೆ ವತಿಯಿಂದ  ತಲುಪಿರುವ ಬಗ್ಗೆ ಮಾಹಿತಿ ಪಡೆಯಲಾಯಿತು. ಮಹೇಶ ಗೋರನಾಳಕರ್ ಕೊರೊನಾ ಸೈನಿಕ ಬೀದರ ವರದಿಗಾರರು .. ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ಭಾಲ್ಕಿ ಕ್ಷೇತ್ರದ ಆಸ್ಪತ್ರೆಯ ಪರಿಸಿಲನೆ ಈಶ್ವರ ಖಂಡ್ರೆ .ಬಡವರಿಗೆ ದವಸ ಧಾನ್ಯ ವಿತರಣೆ ಕರೋನಾ ವ್ಯೆರಸ್ ತಡೆಗಟ್ಟಲು ಮುಂಜಾಗ್ರತೆ ಕ್ರಮ ಮಾಹಿತಿ .

Image
ಬೀದರ ನ್ಯೂಸ್.... ಭಾಲ್ಕಿ ಸುದ್ದಿ... ಹಲಬರ್ಗಾ, ಧನ್ನೂರಾ, ಕಣಜಿ ಪಿಹೆಚ್ ಸಿಗಳಿಗೆ ಶಾಸಕರಾದ ಶ್ರೀ ಈಶ್ವರ್ ಖಂಡ್ರೆ ಭೇಟಿ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ವಿತರಣೆ ಕೊರೊನಾ ಹೋರಾಟದಲ್ಲಿ ವೈದ್ಯರ ಸೇವೆ ಅನನ್ಯ ಭಾಲ್ಕಿ ತಾಲೂಕಿನ ಹಲಬರ್ಗಾ, ಧನ್ನೂರಾ(ಹೆಚ್), ಕಣಜಿ, ಹಾಲಹಳ್ಳಿ(ಕೆ), ಖಟಕ ಚಿಂಚೋಳಿ, ಡಾವರಗಾಂವ, ಕಟ್ಟಿತೂಗಾಂವ ಸೇರಿದಂತೆ ಮುಂತಾದ ಕಡೆಗಳಲ್ಲಿ ಶನಿವಾರ ಶಾಸಕರಾದ  ಶ್ರೀ ಈಶ್ವರ ಖಂಡ್ರೆ ಭೇಟಿ‌ ನೀಡಿ ಕೊರೊನಾ ಸೋಂಕು ನಿಯಂತ್ರಣದ ಕುರಿತು ಮಾಹಿತಿ ಕಲೆ ಹಾಕಿದರು ಬೆಳಗ್ಗೆ ಹಲಬರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕರು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿ, ಆಶಾ ಕಾರ್ಯಕರ್ತೆಯರಿಗೆ ವೈಯಕ್ತಿಕವಾಗಿ ಆಹಾರದ ಕಿಟ್ ವಿತರಿಸಿದರು. ಬಳಿಕ ಶಾಸಕರಾದ  ಶ್ರೀ ಈಶ್ವರ್ ಖಂಡ್ರೆ ಮಾತನಾಡಿ, ಮಹಾಮಾರಿ ಕೋವಿಡ್ ೧೯ ಸೋಂಕು ಎಲ್ಲರ ನಿದ್ರೆಗೆಡಿಸಿದೆ. ಇಂತಹ ಸಂದರ್ಭದಲ್ಲಿ ವೈದ್ಯರು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಮನೆ, ಮಕ್ಕಳನ್ನು ಬಿಟ್ಟು ಕೊರೊನಾ ಹೋರಾಟದಲ್ಲಿ ತೊಡಗಿಸಿಕೊಂಡಿರುವುದು ಅವಿಸ್ಮರಣೆ, ಅನನ್ಯವಾಗಿದೆ ಎಂದು ಬಣ್ಣಿಸಿದರು. ಕೋವಿಡ್ ೧೯ ಸೋಂಕು ತಡೆಗೆ ಇದು ವರೆಗೂ ನಿರ್ದಿಷ್ಟ ಔಷಧಿ ಕಂಡು ಹಿಡಿಯಲ್ಲ ಸಾಧ್ಯವಾಗಿಲ್ಲ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದರಿಂದ ಒಬ್ಬರಿಂದ ಮತ್ತೊಬ್ಬ...

ಆಸ್ಪತ್ರೆಯ ಆಡಳಿತ ಮಂಡಳಿಗೆ ಸಮಸ್ಯೆ ಆಲಿಸಿದ್ದರು ಈಶ್ವರ ಖಂಡ್ರೆ ಭಾಲ್ಕಿ ಶಾಸಕರು ಬಡವರ ಕರುಣಾ ಜನಕ

Image
ಬೀದರ ನ್ಯೂಸ್.. ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಒಂದು ಗ್ರಾಮ ಅದೆ ಈಶ್ವರ ಖಂಡ್ರೆ ಭಾಲ್ಕಿ ಕ್ಷೇತ್ರದ ಶಾಸಕರು ಪ್ರತಿಯೊಂದು ಗ್ರಾಮಕ್ಕೆ ಹೋಗಿ ಜನರ ಸಮಸ್ಯೆ ಆಲಿಸುವುದು ಮಾಡುತ್ತಿದ್ದಾರೆ ಅದೆ ರೀತಿ ಭಾತಂಬ್ರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೊರೊನಾ ಟೆಸ್ಟ್ ಕಿಟ್, ಔಷಧಿ ಸೇರಿದಂತೆ ಇತರ ರೋಗಿಗಳಿಗೆ ವೈದ್ಯಕೀಯ ಸೇವೆಯಲ್ಲಿ ಯಾವುದೇ ಕೊರತೆ ಆಗದಂತೆ ಎಚ್ಚರ ವಹಿಸಬೇಕು ಮತ್ತು ಹೊರ ಜಿಲ್ಲೆ,ರಾಜ್ಯದಿಂದ ಬಂದ ಜನರ ಮೇಲೆ ವೈದ್ಯರು ನಿಗಾಯಿಡಬೇಕು ಎಂದು ಹೇಳಿ ವೈದ್ಯಕೀಯ ಸಿಬ್ಬಂದಿಗಳಿಗೆ ಮಾಸ್ಕಗಳನ್ನು ವಿತರಿಸಿದೆ. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಅಂಬಾದಾಸ ಕೋರೆ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ತಹಸೀಲ್ದಾರ ಅಣ್ಣಾರಾವ ಪಾಟೀಲ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ನಾಯಕರ್, ಡಿವೈಎಸ್ಪಿ ಡಾ.ದೇವರಾಜ ಬಿ, ತಾಲೂಕು ವೈದ್ಯಾಧಿಕಾರಿ ಡಾ.ಜ್ಞಾನೇಶ್ವರ ನೀರಗೂಡೆ ಸೇರಿದಂತೆ ಹಲವರು ಜೊತೆಗಿದ್ದರು. ವರದಿಗಾರರು... ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ತವರು ಜಿಲ್ಲೆ ರಕ್ಷಣೆ ಸದಾಕಾಲವೂ ಸಿದ್ಧ ಈಶ್ವರ ಖಂಡ್ರೆ ಜನರ ಭಾವನೆ ಅರ್ಥ ಮಾಡಿಕೊಂಡು ಬಡವರ ರಕ್ಷಣೆ ದಿನಾಲು ಬಡವರ ಬಂಧು

Image
ಬೀದರ ನ್ಯೂಸ್.. ಇಂದು ಗಡಿ ಭಾಗದ ಲಖಣಗಾಂವ, ಭಾತಂಬ್ರಾ ಸೇರಿ ನಾನಾ ಕಡೆ ಶಾಸಕ ಖಂಡ್ರೆ ಮಿಂಚಿನ ಸಂಚಾರ ಹೊರ ರಾಜ್ಯದಿಂದ ಬಂದ ಜನರ ಮೇಲೆ ನಿಗಾ ಇಡಿ ಭಾಲ್ಕಿ ತಾಲೂಕಿನ ಗಡಿ ಭಾಗದ ಲಖಣಗಾಂವ, ಭಾತಂಬ್ರಾ ಸೇರಿ ಮುಂತಾದ ಕಡೆಗಳಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಈಶ್ವರ ಖಂಡ್ರೆ ಮಿಂಚಿನ ಸಂಚಾರ ನಡೆಸಿ ಲಾಕ್ ಡೌನ್ ಸ್ಥಿತಿಗತಿಯ ಅವಲೋಕನ ನಡೆಸಿದರು ಶುಕ್ರವಾರ ಬೆಳಗ್ಗೆ ಲಖಣಗಾಂವ ಚೆಕ್ ಪೋಸ್ಟ್ ಗೆ  ಭೇಟಿ ನೀಡಿದ ಶಾಸಕರು, ಗಡಿಯಾಚೆ ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್ ೧೯ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಗಡಿಯಲ್ಲಿ ಕಟ್ಟಚ್ಚೆರ ವಹಿಸುವಂತೆ ಸೂಚನೆ ನೀಡಿದರು ಬಳಿಕ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕರು ಭೇಟಿ ನೀಡಿ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಹಣ್ಣು ವಿತರಿಸಿ, ಚಿಕಿತ್ಸೆಗೆ ಹೊರಗಿನಿಂದ ಬರುತ್ತಿರುವ ರೋಗಿಗಳ ಮಾಹಿತಿ ಪಡೆದುಕೊಂಡರು. ಅಲ್ಲಿಂದ  ಭಾತಂಬ್ರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಖಂಡ್ರೆ ಅವರು ಭೇಟಿ ನೀಡಿ ಕೊರೊನಾ ಟೆಸ್ಟ್ ಕಿಟ್, ಔಷಧಿ ಸೇರಿದಂತೆ ವೈದ್ಯಕೀಯ ಸೇವೆಯಲ್ಲಿ ಯಾವುದೇ ಕೊರತೆ ಆಗದಂತೆ ಎಚ್ಚರ ವಹಿಸಬೇಕು ಎಂದರು. ಹೊರ ಜಿಲ್ಲೆ, ರಾಜ್ಯದಿಂದ ಬಂದ ಜನರ ಮೇಲೆ ವೈದ್ಯರು ನಿಗಾಯಿಡಬೇಕು ಎಂದು ಶಾಸಕ ಈಶ್ವರ್ ಖಂಡ್ರೆ ತಿಳಿಸಿದರು ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಅಂಬಾದಾಸ ಕೋರೆ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾ...

ಬಡವರ ರಕ್ಷಣೆ .ಪರಿಸರ ರಕ್ಷಣೆ ಕೆಪಿಸಿಸಿ ಕಾರ್ಯಧ್ಯಕ್ಷರು ಈಶ್ವರ ಬಿ ಖಂಡ್ರೆ ಶಾಸಕರು ಭಾಲ್ಕಿ

Image
ಬೀದರ ನ್ಯೂಸ್.... ಒತ್ತಡದ ನಡುವೆ ಶಾಂತಿಧಾಮ ಆಶ್ರಮದಲ್ಲಿ ಗಿಡಕ್ಕೆ ನೀರಿಣಿಸುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಭಾಲ್ಕಿ ಸದಾ ರಾಜಕೀಯ ಒತ್ತಡ, ಕ್ಷೇತ್ರದ ಜನರ ಸಮಸ್ಯೆ ಆಲಿಸುವುದರಲ್ಲಿಯೇ ಬಹುತೇಕ ಸಮಯ ಕಳೆದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕರೂ ಆಗಿರುವ ಈಶ್ವರ ಖಂಡ್ರೆ ಅವರಿಗೆ ಕೊರೊನಾ ಲಾಕ್ ಡೌನ್ ಎಫೆಕ್ಟ್ ನಿಂದ ಇದೇ ಮೊದಲ ಬಾರಿಗೆ ರಿಲ್ಯಾಕ್ಸ್ ಮೂಡನಲ್ಲಿ ಒಂದಷ್ಟು ಸಮಯ ಕಳೆಯಲು ಅವಕಾಶ ಸಿಕ್ಕಂತಾಗಿದೆ. ಕೊರೊನಾ ಕೋವಿಡ್ 19 ವೈರಸ್‌ ಭೀತಿ ಪರಿಣಾಮ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇಂತಹ ಸಂದರ್ಭದಲ್ಲಿ ಬಹುತೇಕ ಜನಪ್ರತಿನಿಧಿಗಳು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಆದರೆ, ಶಾಸಕ ಖಂಡ್ರೆ ಅವರು ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಿಸಲು ಅಧಿಕಾರಿಗಳ ಸರಣಿ ಸಭೆ ನಡೆಸುವುದರ ಜತೆಗೆ ಬಡಜನರು, ನಿರ್ಗತಿಕರು, ಅಲೆಮಾರಿ ಜನ, ಕೂಲಿಕಾರ್ಮಿಕರಿಗೆ ವೈಯಕ್ತಿಕವಾಗಿ ನೆರವಾಗುವ‌ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದರೊಟ್ಟಿಗೆ ಕುಡಿವ ನೀರಿನ ಸಮಸ್ಯೆ ನೀಗಿಸಲು ಸರಕಾರದ ಅನುದಾನ ನೀರಿಕ್ಷಿಸದೇ ಸ್ವಂತ ಹಣದಿಂದ ಹಲವು ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಮುಂದಾಗಿದ್ದಾರೆ. ಇನ್ನು ಗ್ರಾಮೀಣ ಭಾಗಗಳಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಬೇಸಿಗೆ ಆರಂಭದಿಂದಲೂ ನಿರಂತರವಾಗಿ ಅಧಿಕಾರಗಳ ಸಭೆ ನಡೆಸಿ ಜನರ ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡುತ್ತ ಬಂದಿದ್ದಾರೆ ನಾವು ಕೂಲಿ ಕಾರ್ಮಿಕರಿಗೆ ಒ...

ಕರ್ನಾಟಕ ಬ್ಯಾಂಕ್ ಲಾಕ್ ಡೌನ್ ನಿಯಮ ಉಲ್ಲಂಘನೆ ಬಸವಕಲ್ಯಾಣ .ಜೀವ ಇದರೆ ಜೀವನ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿ

Image
ಬೀದರ ನ್ಯೂಸ್.... ಬಸವಕಲ್ಯಾಣ :- ಹರಳಯ್ಯಾ ವ್ರತ ದಲ್ಲಿರುವ ಕರ್ನಾಟಕ ಬ್ಯಾಂಕ್ ಸೊಸೆ ಎಲ್ ಡಿಸ್ಟನ್ಸ ಕಾಯಿದು ಕೊಳ್ಳದೆ ಉಲ್ಲಂಘಿಸಿದೆ ಕಟ್ಟು ನಿಟ್ಟಿನ ಪಾಲನೆ ಮಾಡಿದರೆ ಬ್ಯಾಂಕುಗಳು ವ್ಯವಹಾರ ಮಾಡಲು ಅವಕಾಶ ನೀಡಬೇಕು ,  ಸೊಸಲ್ ಅಂತರ ಕಾಪಾಡೆದೆ ಇದ್ದಲ್ಲಿ ನಿರ್ಲಕ್ಷ್ಯ ತೋರಿದ್ದರೆ ಕೊರೋನಾ ವೈರಸ್ ತಡೆಯಲು ಕಷ್ಟ ವಾಗುತದೆ, ಪ್ರತಿಯೊಬ್ಬ ವ್ಯಕ್ತಿಯೂ ಸೊಸಲ್ ಅಂತರ ಕಾಯಿದು ಕೊಳ್ಳುವುದು ಭಾರತಿಯರ ಕರ್ತವ್ಯ ಇದೆ , ಕೇಂದ್ರ ಸರ್ಕಾರದ ವತಿಯಿಂದ ಬಡವರ ಖಾತೆಗೆ ಹಣ ಜಮಾ ಆಗಿದು ಅದನ್ನು ಪಡೆಯಲು ಗ್ರಾಹಕರು ಬ್ಯಾಂಕ್ ಗಳ ಮುಂದೆ ಮುಗಿ ಬಿದ್ದಿದ್ದಾರೆ, ಜೀವ ಪರವೆ ಕಾಪಾಡದೆ ಮರೆತು ಹಣ ಪಡೆಯಲು ಬೇಳಗೆಯಿಂದ ಸಾರ್ವಜನಿಕರು ಕ್ಯೂ ನಲ್ಲಿ ನಿಂತಿರುವುದು ನೊಡಿದ್ದರೆ ಮೊದಿಯವರು ಮಾಡಿದ ಆದೇಶ ಸಂಪೂರ್ಣವಾಗಿ ನಿರ್ಲಕ್ಷ್ಯ ಸಿರುವುದು ಹೆಚ್ಚನ ಸ್ಥಳಗಳಲ್ಲಿ ಕಂಡು ಬರುತಿವೆ, ಬ್ಯಾಂಕ್ ವ್ಯವಸ್ಥಾಪಕರು ಒಂದು ವಾಚಮಾನ ಕೂಡಾ ನೇಮಕಾತಿ ಮಾಡಿರುವುದಿಲ್ಲ, ವರದಿಗಾರರು.. ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ಹಣ ಕೊಟ್ಟರೆ ಮಾತ್ರ ಪಡಿತರ ಧಾನ್ಯ ವಿತರಣೆ ಮದಕಟ್ಟಿ ಗ್ರಾಮ ಬಡವರಿಗೆ ಒಂದು ನ್ಯಾಯ? ಶ್ರೀಮಂತ ವ್ಯಕ್ತಿಗೆ ಒಂದು ನ್ಯಾಯ ? ಲಾಕ್ ಡೌನ್ ಕಾನೂನು ನಿಯಮ ಪಾಲನೆ ಮಾಡಿ ಗ್ರಾಮಸ್ಥರ ಆಕ್ರೋಶ

ಬೀದರ ನ್ಯೂಸ್. ಇದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮದಕಟ್ಟಿ ಎಂಬ ಗ್ರಾಮದಲ್ಲಿ  ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಾಕ ವ್ಯವಾಹರ ಇಲಾಖೆ ಮದಕಟ್ಟಿ  ಎಂಬ ಗ್ರಾಮದಲ್ಲಿ ಬಡ ಕುಟುಂಬದ ಜನರು ನ್ಯಾಯ ಬೆಲೆ ಅಂಗಡಿ ಯಲ್ಲಿ ಅಕ್ಕಿ ಮತ್ತು ಆಹಾರ ಸಾಮಾಗ್ರಿಗಳು  ಪಡೆಯಬೇಕಾದರೆ ಇಲ್ಲಿನ ಜನರ ಹತ್ತಿರ   ಅಂಗಡಿಯ ಮಾಲೀಕರ ಹಣ  ಪಡೆಯುತ್ತಿದ್ದಾರೆ. ಅಲ್ಲಿನ ಜನರು  ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ .ನಾವು ಈ ಒಂದು ದ್ರಶ್ಯ ದಲ್ಲಿ ನೋಡಬಹುದು ಅಷ್ಟೆ ಅಲ್ಲ ಜನರು ತಮ್ಮ ಒಂದು ಬೈಮೆಟ್ಟರಿಕ ಥಂ ಅನು ಪಡೆಯಬೇಕಾದರೆ ಅವರ ಹತ್ತಿರ 20 ರೋಪಯಗಳು ಪಡೆಯುತ್ತಿದ್ದಾರೆ. ಪಾಪ ಜನರ ಕಥೆ ಹೇಗೆ ಆಹಾರ ಸರಬರಾಜು ತಾಲೂಕ ಅಧಿಕಾರಿ ಗಳು ಕೂಡ ಆ ಸ್ಥಳದಲ್ಲಿ ಇದರು ? ಅಧಿಕಾರಿಗಳ್ಳಿಗೆ  ಜನರು ತಮ್ಮ ಸಮಸ್ಯೆಗಳು ಹೇಳಿದರು ? ಇವರು ಸುಮಾರು  ದಿವಾಸದಿಂದ ನಮ್ಮ ಹತ್ತಿರ ಹಣ ಪಡೆಯುತ್ತಿದ್ದಾರೆ ? ಎಂದು ಹೇಳಿದರು ? ಹೀಗಾದರೆ ಜನರ ಗೊಳ್ಳು ಕೇಳ್ಳುವರು ಯಾರೂ ? ಒಂದು ಕಡೆಯಿಂದ ಕೊರೊನ್ ಎಂಬ ಮಾಹಾಮಾರಿ ವೈರಸ್ ಲಾಕ್ ಡೌನ್ ಇದರು ಜನರು ಬಡವರು ಹಣವನ್ನು ಪಾವತಿ ಎಲ್ಲಿಂದ ಹಣ ನೀಡಬೇಕು? ಎಲ್ಲಿಂದ ಹಣ ಕೂಡ ಬೇಕು ಹೇಳ್ಳಿ   ಸರ್ಕಾರವು ಈ ಕಡೆ ಗಮನ ಹರಿಸಬೇಕು ಎಂದು  ಗ್ರಾಮಸ್ಥರು ಮನವಿ ಮಾಧ್ಯಮದವರ ಮುಂದೆ ಅಳಲನ್ನು ಹೇಳಿದರು.......... ಅಷ್ಟೇ ಅಲ್ಲ ಇಲ್ಲಿ ಕೋವಿಡ19 ಸಮಯ ದಲ್ಲಿ ನ್...

ಕಾನೂನು ಬಗ್ಗೆ ಕಾಳಜಿ ಇರಬೇಕು .ಅಂಬೇಡ್ಕರ್ ಜಯಂತಿ ಮನೆಯಲ್ಲಿ ಆಚರಣೆ ಮಾಡಿ ಮಹೇಶ್ ಗೋರಾನಾಳಕರ್ ಮನವಿ ಬೀದರ ಜಿಲ್ಲೆಯ ಜನತೆಗೆ

Image
ಬೀದರ ನ್ಯೂಸ್... ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು  ಮನೆಯಲ್ಲಿ ಆಚರಿಸಿ ಕಾನೂನನ್ನು ಗೌರವಿಸೋಣ ಪ್ರತಿ ವರ್ಷ 14 ಏಪ್ರಿಲ್ ರಂದು ದೇಶ ವಿದೇಶಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು  ಸಾರ್ವಜನಿಕವಾಗಿ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು ಕೊರೊನಾ ರೋಗದ ಹಿನ್ನಲೆಯಲ್ಲಿ ದೇಶವೆ ಲಾಕ್ ಡೌನ್ ಆಗಿರುವ ಪರಿಣಾಮ 129 ನೇ ವರ್ಷದ ಅಂಬೇಡ್ಕರ್ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಿ ಲಾಕ್ ಡೌನ್ ಉಲಂಘನೆ ಮಾಡಿ ಕಾನೂನಿಗೆ ಭಂಗ ತರದೆ ಪ್ರತಿ ಮನೆ ಮನೆಗಳಲ್ಲಿ  ಸರಳವಾಗಿ ಆಚರಿಸಿ ಮಕ್ಕಳಿಗೆ,ಯುವಕರಿಗೆ,ವಿದ್ಯಾರ್ಥಿಗಳಿಗೆ,ಮಹಿಳೆಯರಿಗೆ ಪ್ರಬುದ್ಧ ಭಾರತ ನಿರ್ಮಾಣದಲ್ಲಿ ಅಂಬೇಡ್ಕರ್ ರವರ ಪ್ರಮುಖ ಪಾತ್ರದ ಬಗ್ಗೆ ತಿಳಿಸೋಣ ಮತ್ತು ಅಂಬೇಡ್ಕರ್ ರವರು ನೀಡಿರುವ ಸಮಾನತೆ,ಭಾವೈಕ್ಯತೆ, ಭ್ರಾತೃತ್ವದ ಸಂದೇಶ ಸಾರುವ ಸಂವಿಧಾನದ ಪ್ರಸ್ತಾವನೆಯನ್ನು ಓದೋಣ ಲಾಕ್ ಡೌನ್ ಮುಗಿಯುವವರೆಗೂ ಅಂಬೇಡ್ಕರ್ ಜಯಂತಿ ನಿಮಿತ್ತ ನಮ್ಮ ಮನೆಯ ಸುತ್ತ ಮುತ್ತಲಿರುವ ನಿರ್ಗತಿಕರು, ಬಡವರಿಗೆ ಹಸಿದವರಿಗೆ ಅನ್ನದಾನ ಮಾಡಿ ಮಾನವಿಯತೆ ಮೆರೆದು ಕಾನೂನಿಗೆ ಗೌರವಿಸೋಣ ಮಹೇಶ ಗೋರನಾಳಕರ್ ಜಿಲ್ಲಾ ಸಂಚಾಲಕರು ಮಾನವ ಬಂಧುತ್ವ ವೇದಿಕೆ ಹಾಗೂ ಬುಧ್ದ ಬಸವ ಅಂಬೇಡ್ಕರ್ ಯುವ ಸಂಘ ಬೀದರ ವರದಿಗಾರರು.. ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ಬಿ ಜೆ ಪಾರ್ವತಿ ಮೇಡಂ ಓದಿನ ಮನೆ ಕಾರ್ಯಕ್ರಮ ಕರೋನಾ ವ್ಯೆರಸ್ ತಡೆಗಟ್ಟಲು ಜಾಗ್ರತಿ ಮನೆಯಲ್ಲಿ ಹೆಣ್ಣು ಜಗದ ಬೆಳಕು ಚೆಲ್ಲುವ ಸಾಹಸ ಕಾರ್ಯ

Image
ಬೀದರ ನ್ಯೂಸ್.. ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಪ್ರಾರಂಭವಾದ ಓದಿನ ಮನೆ ಕಾರ್ಯಕ್ರಮ. ಇವತ್ತಿಗೆ ಹನ್ನೊಂದು ದಿವಸ. ಇವತ್ತು ನಾನೇ ಬರೆದ ,ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿ.ಎ.3rd ಸೆಮೆಸ್ಟ್ರಿಗೆ ಸೆಲೆಬಸ್ ಆದ ಕಥೆಯನ್ನು ಓದುತ್ತೇವೆಂದು ಮಕ್ಕಳು ಆಸೆ ಪಟ್ಟಿದ್ದಕ್ಕಾಗಿ ಅದೇ ಕಥೆಯನ್ನು ಓದಿ ಸಲಾಯಿತು.  " ಗುಜ್ಜೆವ್ವನ ಗುಡಿಸಲೊಳಗ "  ಕಥೆಯನ್ನು ಓದಿದ ಮಕ್ಕಳು ಖುಷಿ ಪಟ್ಟರು .ಪಾರು ಆಂಟಿ ಬಾಳಿ ಛಂದ್ ಬರದೀದಿ ಅಂದ್ರು .ನಂಗೂ ಖುಷಿಯಾಯಿತು.  ಗುಜ್ಜೆವ್ವ ಕಪ್ಪು ಸುಂದರಿ ಅವಳ ಬಣ್ಣವೇ ಅವಳ ಗಂಡನ ಪ್ರೀತಿಯಿಂದ ವಂಚಿತಗೊಳಿಸುತ್ತದೆ. ಗುಜ್ಜೆವ್ವನ ಕಣ್ಣೆದುರುಲ್ಲಿಯೇ ಇನ್ನೊಬ್ಬಳೊಂದಿಗೆ ಸಂಸಾರ ಮಾಡುವ ಗಂಡನನ್ನು ಸಹಿಸಿಕೊಂಡು ತನ್ನ ಮಕ್ಕಳ ಪಾಲನೆ ಪೋಷಣೆ ಮಾಡಲಿಕ್ಕಾದೆ ಒದ್ದಾಡುವ ಗುಜ್ಜೆವ್ವನ ಮೈಯಲ್ಲಿ ಅದೊಂದು ದಿವಸ ಏಕಾಏಕಿ ಚಿಂಚಲಿ ಮಾಯವ್ವ ಬರ್ತಾಳೆ  . ನಿಜವಾಗಿಯೂ ಅವಳ ಮೈಯಲ್ಲಿ ದೇವರು ಬರುತ್ತದೆಯೇ?  ಆಕೆ ತನ್ನ ಗಂಡ ಮಕ್ಕಳೊಂದಿಗೆ ಸಂಸಾರ ಮಾಡುವಳೆ?ಮುಂದೆ  ನಾಯಿತು ಅಂತ ತಿಳಿಯಲು ನೀವೆ ಕಥೆಯನ್ನು ಓದಿದರೆ ಚೆನ್ನ. ಇವತ್ತು ಕಥಾವಾಚನದ ನಂತರ ಮಕ್ಕಳೊಂದಿಗೆ ಅಂಗದಲ್ಲಿ ಉದುರಿ ಬಿದ್ದ ಗಿಡದ ಎಲೆಗಳನ್ನು ಉಡುಗಿ ಸ್ವಚ್ಛಗೊಳಿಸಿದೇವು ಕರೋನಾ ವ್ಯೆರಸ್ ತಡೆಗಟ್ಟಲು ದಿನಾಲು ಮನೆಯಲ್ಲಿ ತಮ್ಮ ಕುಟುಂಬದ ಸದಸ್ಯರು ಸೇರಿ ಹಲವಾರು ಕಥೆಗಳು ಕಾದಂಬರಿಗಳು .ನಾಟಕಗಳು ಪುಸ್ತಕ...

ಪ್ರೀತಿ ಪ್ರೇಮ ಸುಮಧುರ ಧ್ವನಿ ಬರಹಗಾರ ಕವಿತೆ ರಾಹುಲಕ್ರಾಂತಿಕಾರಿ ಹೆಣ್ಣು ಮಕ್ಕಳ ಮೇಲೆ ಕರುಣೆ ಇರಬೇಕು ...

ಬೀದರ ನ್ಯೂಸ್... 💐##  ಕವಿತೆಗಳು ##💐 ################# ✍️ಕವಿತೆ ಬರೆದವರು ಕವನ ಬರೆದವರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.✍️ 💐ನಿನ್ನ ನೆನಪು ಇನ್ನೂ ಕಾಣೆಯಾಗದು ನನ್ನ ಉಸಿರಿನಲ್ಲಿ 💐 ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, 🌻ನಿನ್ನ ಜೀವ ಯಾವಾಗಲೂ ನನ್ನ ಉಸಿರು ಕಟ್ಟುವಂತೆ ಬಿಗಿಯಾಗಿ ನೆನಪು ಕಾಡುವುದು🌻🌻🌻🌻🌻🌻🌻🌻 ನಿನ್ನ ಗೆಜ್ಜೆಯ ಗುರುತು ನಾದದಲ್ಲಿ ನನ್ನ ಜೀವ ನಾನಾಗಿರುವೆ. 🌷🌷🌷🌷🌷🌷🌷🌷 ನಿನ್ನ ನಗುವೆ ನನ್ನಗೆ ಆಕಾಶವಾಣಿ ಇದಹಾಗೆ.ನಿನ್ನ ಉಸಿರೆ ನನಗೆ ಜೀವನದ ದಾರಿ. 🌹🌹🌹🌹🌹🌹🌹🌹 ನಿನ್ನ ಪ್ರೀತಿ ವಿಶ್ವಾಸ ಕನಸು ನನ್ನ ಮನಸಿನಲ್ಲಿ ಉಸಿರಾಗಿ ಉಳಿಯಿತು. 🌱🌱🌱🌱🌱🌱🌱🌱 ಪ್ರೀತಿ ಪ್ರೇಮ ಮಾಡಿ ಆದರೆ ಪ್ರೀತಿಗೆ ಮೋಸದ ಪ್ರೊಫೈಲ್ ಮಾಡಬೇಡಿ. 🍀🍀🍀🍀🍀🍀🍀🍀 ನೂರಾರು ಸಾವಿರಾರು ವರ್ಷಗಳ ಕಾಲ ನಿನ್ನ ನೆನಪು ನನ್ನ ಉಸಿರಿನಲ್ಲಿ.ನನ್ನ ಉಸಿರು ನಿನ್ನ ಹೆಜ್ಜೆಯ ದಾರಿಯಾಗಲ್ಲಿ. 🌾🌾🌾🌾🌾🌾🌾🌾 ನನ್ನ ಜೀವನದ ಆತ್ಮ ವಿಶ್ವಾಸ ಚರಿತ್ರೆ ನಿನ್ನಾದರೆ.ನಿನ್ನ ಆತ್ಮ ವಿಶ್ವಾಸ ಚರಿತ್ರೆ ದಾರಿದೀಪ ನಾನಾಗುವೆ. 🌺🌺🌺🌺🌺🌺🌺🌺 ಕಣ್ಣಿನ ರೆಪೆ ನಿನ್ನಾದರೆ.ಕಣ್ಣಿನ ನೋಟ ನಾನಾಗಿರುವೆ. 🌾🌾🌾🌾🌾🌾🌾🌾 ಸಾಧನೆಯ ಮೌಲ್ಯ ನಿರ್ಣಯ ನಿನ್ನದಾದರೆ .ಸಾಧಿಸುವ ಗುರಿ ನಾನಾಗಿರುವೆ. 🌼🌼🌼🌼🌼🌼🌼🌼 ಕತ್ತಲೆಯಲ್ಲಿ ದೀಪ ನಿ...

"ಓದಿನ ಮನೆ " ಕಾರ್ಯಕ್ರಮ ೯ನೇ ದಿನಕ್ಕೆ ವಿಜಯಕುಮಾರ್ ಸೋನಾರೆ ಅಧ್ಯಕ್ಷರು ಮನೆಯಲ್ಲಿ

ಬೀದರ ನ್ಯೂಸ್... ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಪ್ರಾರಂಭವಾದ  " ಓದಿನ ಮನೆ "ಕಾರ್ಯಕ್ರಮವು 9ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಎ ಆರ್ ಮಣಿಕಾಂತ್ ಅವರು ಬರೆದ  " ಯೋಧನ ಪತ್ರವನ್ನು ಎದುರಿಗಿಟ್ಟುಕೊಂಡು " ಎಂಬ  ಕಥೆಯನ್ನು ಓದಿದ ಮಕ್ಕಳೆಲ್ಲರೂ ಒಂದು ಕ್ಷಣ ಮೌನವಾಗಿ ಕುಳಿತು ಕೊಂಡರು . ಕಾಶ್ಮೀರದ ಕಣಿವೆಯಲ್ಲಿ ಕೆಲಸ ಮಾಡುವ ಯೋಧನೊಬ್ಬನ ಭಾವನೆಗಳ ಸುತ್ತ ಮುತ್ತ ಹೆಣೆದ ಕಥೆಯಿದು. ಮನೆಯಲ್ಲಿ ಆರಾಮವಾಗಿ ಎಲ್ಲ ಬಂಧು ಬಳಗದವರೊಂದಿಗೆ ಸೇರಿ ಹಬ್ಬ ಹರಿದಿನಗಳನ್ನು ಆಚರಿಸಿ ಸಂಭ್ರಮಿಸುವ ಹೊತ್ತಿನಲ್ಲಿ ನಮ್ಮ ಯೋಧರು ನಮಗಾಗಿ ಗಡಿ ಕಾಯುತ್ತಾ ಇರುತ್ತಾರಲ್ಲ. ಜೀವನದ ಅತ್ಯಮೂಲ್ಯ ಕ್ಷಣಗಳನ್ನು ನಮಗಾಗಿ ತ್ಯಾಗ ಮಾಡುವ ಅವರಿಗೊಂದು ಸೆಲ್ಯೂಟ್ ಹೇಳಿದೇವು . ಸಿ.ಆರ್.ಪಿ.ಎಫ್ ನಲ್ಲಿ ದೇಶಕ್ಕಾಗಿ ದುಡಿಯುತ್ತಿರುವ ನನ್ನ ತಮ್ಮನಿಗೂ ಕೂಡ ಒಳ್ಳೆಯದಿರಲಿ ಕೆಟ್ಟದಿರಲಿ ಯಾವ ಕಾರ್ಯಕ್ರಮದಲ್ಲಿಯೂ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅಪ್ಪು ನನ್ನ ತಮ್ಮ ಹಾಗೂ ಅವ್ವಾ  ತೀರಿಕೊಂಡಾಗ ಸಹಿತ ಅವನು ಮೂರನೇ ದಿವಸಕ್ಕೆ ಬಂದಿದ್ದ. ನಾನು ಬಾವುಕಳಾದೆ .ಕಾರಣ ಕಾರ್ಯಕ್ರಮ  ಮುಗಿಸಿದೇವು . ಬಾಂಧವರೇ ಮನೆಯಲ್ಲೇ ಇರಿ .ಕರೋನಾ ಓಡಿಡಿಸುವುದಕ್ಕೆ ಸಹಕರಿಸಿ. ವರದಿಗಾರರು.. ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಾಮಾಜಿಕನ್ಯಾಯಕ್ಕಾಗಿ ಔರಾದ ತಾಲೂಕ ಅಧ್ಯಕ್ಷರು ಸತೀಶ್ ವಗ್ಗೆ ಹಾಗೂ ಹಾಗೂ ಗ್ರಾಮಸ್ಥರ ನೇತ್ರತ್ವದಲ್ಲಿ ರಸ್ತೆ ಬಂದ್ .

Image
ಬೀದರ ನ್ಯೂಸ್.. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಾಮಾಜಿಕ ನ್ಯಾಯಕ್ಕಾಗಿ ಔರಾದ ತಾಲೂಕ ಅಧ್ಯಕ್ಷರು ಸತೀಶ್ ವಗ್ಗೆ ಹಾಗೂ ಗ್ರಾಮಸ್ಥರ ನೇತ್ರತ್ವದಲ್ಲಿ ಲಾಕ್ ಡೌನ್ ಕ್ವಡಗಾಂವ ಗ್ರಾಮದ ರಸ್ತೆ ಬಂದ್  ಔರಾದ ತಾಲೂಕ. ಬೀದರ ಜಿಲ್ಲೆಯ ಔರಾದ ತಾಲೂಕಿನ ಕ್ವಡಗಾಂವ ಗ್ರಾಮದಲ್ಲಿ ರಸ್ತೆಯ ಮೇಲೆ ಗಿಡ ಮರಗಳ ಪೊದೆಗಳಿಂದ ರಸ್ತೆಯ  ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಲಾಯಿತು. ದೇಶದಲ್ಲಿ ದಿನೆ ದಿನೆ ಕರೋನಾ ವ್ಯೆರಸ್ ಸೋಂಕಿತರ ಸಂಖ್ಯೆ ಹೆಚ್ಚು ಆಗುತ್ತಿರುವುದರಿಂದ ಪ್ರತಿಯೊಂದು ಗ್ರಾಮದಲ್ಲಿ ರಸ್ತೆ ಬಂದ್ ಮಾಡಲಾಗುತ್ತಿದ್ದೆ ಇದರಿಂದ ಹಳ್ಳಿಯ ಜನರು ಹಳ್ಳಿಯಿಂದ ಬೇರೆ ಕಡೆಗೆ ಸಾಗುವುದು ಗ್ರಾಮಸ್ತರು ನಿಲ್ಲಿಸಲು ನಿರ್ಧರಿಸಿತು. ಭಾರತದ ದೇಶದ ಪ್ರಧಾನ ಮಂತ್ರಿ ಅವರ  ಆದೇಶವನ್ನು ಪ್ರತಿಯೊಂದು ಹಳ್ಳಿಯ ಜನರು ಪಾಲಿಸುತ್ತಿರುವುದು ಬಹಳಷ್ಟು ಮಟ್ಟಿಗೆ ಓಳ್ಳೆಯ ಮಾರ್ಗ ವಾಗಿದ್ದೆ. ಈ ಗ್ರಾಮದಲ್ಲಿ ಗ್ರಾಮಸ್ಥರು ಸೇರಿದಂತೆ ಹಲವಾರು ಮುಂಖಡರು ಸೇರಿ ಗ್ರಾಮದ ರಕ್ಷಣೆ ನಮ್ಮ ದೇಶದ ರಕ್ಷಣೆ .ನಾವು ನಮ್ಮ ಗ್ರಾಮದ ರಕ್ಷಣೆ ಮಾಡಿದರೆ ಯಾರಿಗೂ ಕೂಡ ಕರೋನಾ ವ್ಯೆರಸ್ ಸಮಸ್ಯೆ ಆಗುವುದಿಲ್ಲ ಇದರಿಂದ ನಮ್ಮ ಗ್ರಾಮದ ರಕ್ಷಣೆ ನಮ್ಮ ಜವಾಬ್ದಾರಿ ಹೊತ್ತಿದೆ ಆದರಿಂದ ನಾವೆಲ್ಲರೂ ಒಪ್ಪಿಗೆ ವಿಚಾರ ವಿನಿಮಯ ಮಾಡಿ ಕರೋನಾ ವ್ಯೆರಸ್ ತಡೆಗಟ್ಟಲು ಹೋರಾಡಲು ಪ್ರಾರಂಭಿಸಿದರು. ಈ ರೀತಿ ಪ್ರತಿಯೊಂದು ಗ್ರಾಮದಲ್ಲಿ ಇಂತಹ ಕಾರ್ಯ ಮಾಡಿದರೆ ನಮ್ಮೆಲ್...

"ಓದಿನ ಮನೆ " ಕಾರ್ಯಕ್ರಮ ಬೀದರ ವಿಜಯಕುಮಾರ್ ಸೋನಾರೆ ಮನೆಯಲ್ಲಿ ಕರೋನಾ ವ್ಯೆರಸ್ ತಡೆಗಟ್ಟಲು ಜಾಗ್ರತಿ ಕಾರ್ಯ .

Image
ಬೀದರ ನ್ಯೂಸ್... ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ 8ನೇ ದಿವಸದ " ಓದಿನ ಮನೆ " ಕಾರ್ಯಕ್ರಮದಲ್ಲಿ ಇಂದು "ಕೋಪದ ಕೈಗೆ ಬುದ್ಧಿ ಕೊಡುವ ಎಲ್ಲ ಅಪ್ಪಂದಿರಿಗೆ " ಎಂಬ ಆರ್ ಮಣಿಕಾಂತ್ ಅವರು ಬರೆದ ಕಥೆಯನ್ನು ಡಾ ಗಂಥಿಕಾ ಸೋನಾರೆ ಓದಿದರು. ಶಿಸ್ತಿನ ಹೆಸರಿನಲ್ಲಿ ಮಗನನ್ನು  ಪ್ರತಿನಿತ್ಯ ಸಣ್ಣ ಪುಟ್ಟ ತಪ್ಪುಗಳಿಗೂ ಕಪಾಳಕ್ಕೆ ಬಾರಿಸಿ , ನನ್ನ ಮಗನನ್ನು ತುಂಬಾ ಸ್ಟ್ರಿಕ್ಟ್ ಆಗಿ ಬೆಳೆಸುತ್ತಿದ್ದೇನೆಂದು ಬೀಗುವ ತಂದೆಗೆ, ಮುಂದೊಂದು ದಿನ ತಾನು ಕಪಾಳಕ್ಕೆ ಬಾರಿಸಿದ್ದರ ಪರಿಣಾಮ ಮಗನಿಗೆ ಶಾಶ್ವತವಾದ ಕಿವುಡುತನ ಬಂತು ಎಂದು ವೈದ್ಯರ ಮೂಲಕ ತಿಳಿದು ಪಶ್ಚಾತ್ತಾಪವಾಗುತ್ತದೆ. ಆದರೆ  ಅಪ್ಪ ಹೊಡೆದದ್ದು ನನ್ನನ್ನು ಚೆನ್ನಾಗಿ ಬೆಳೆಸುವ ಉದ್ದೇಶದಿಂದ ಎಂದು ತಂದೆಯನ್ನು ದೂರದೆ , ಆದದ್ದಾಯಿತು ಚಿಂತೆ ಮಾಡಬೇಡಿ ಎಂದು ತಂದೆಗೆ ಸಮಾಧಾನ  ಹೇಳುತ್ತಾನೆ .ಲೇಖಕರು ತುಂಬಾ ಸರಳ ಮತ್ತು ಸುಂದರವಾದ ನಿರೂಪಣೆಯೊಂದಿಗೆ ಕಥೆಯನ್ನು ಕಟ್ಟಿ ಕೊಟ್ಟಿದ್ದಾರೆ.. ಎರಡನೇ ಕಥೆ ರವೀಂದ್ರನಾಥ್ ಟ್ಯಾಗೋರ್ ಅವರು ಬರೆದ" ಬಿಕಾರಿ "  ನಿಸ್ವಾರ್ಥ ಬಿಕ್ಷುಕಿಯೊಬ್ಬಳ ಕಥೆ . ಇದನ್ನು ಖುಷಿ ಹಿಂದಿಯಲ್ಲಿ ಓದಿದರೆ ಅದನ್ನು ಕನ್ನಡಕ್ಕೆ ಅನುವಾದಿಸಿ ವಿವರಿಸಿದ್ದು ಸಾಯಿಕಿರಣ . ಕೊನೆಗೆ ಸಾಹಿತ್ಯ ಳ ವಚನ ಗಾಯನದೊಂದಿಗೆ ಕಾರ್ಯಕ್ರಮ ಮುಗಿಸಲಾಯಿತು. ಸ್ನೇಹಿತರೇ  ಮನೆಯಲ್ಲೇ ಇರಿ . ಸಾಧ್ಯವಾದಷ್ಟು ನಿಮಗೆ ಖುಷಿ ಕೊಡುವ ಯಾವ...

ಬೀದರ ಜಿಲ್ಲೆಯ ತಾಲ್ಲೂಕ ವರದಿಗಾರರು ಬೇಕಾಗಿದ್ದಾರೆ.

ಬೀದರ ನ್ಯೂಸ್.. ತಾಲ್ಲೂಕ ವರದಿಗಾರರು ಬೇಕಾಗಿದ್ದಾರೆ. ನಮ್ಮ ಮಹಾಪಾಪಿ ಪತ್ರಿಕೆಗೆ ಬೀದರ ಜಿಲ್ಲೆಯ ಈ ಕೆಳಗಿನ ತಾಲ್ಲೂಕುಗಳಿಗೆ .ತಾಲ್ಲೂಕು ವರದಿಗಾರರು ಬೇಕಾಗಿದ್ದಾರೆ. ಔರಾದ ಕಮಲನಗರ ಹುಲಸೂರ ಚಿಟ್ಟಗುಪ್ಪ ಭಾಲ್ಕಿ ಹುಮನಾಬಾದ ಬಸವಕಲ್ಯಾಣ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ ಮತ್ತು ಕನ್ನಡ ಬರೆಯಲು ಓದಲು ಆಸಕ್ತಿಯುಳ್ಳ ಯುವಕರು ಈ ಕೆಳಗಿನ ಇ.ಮೆಲ್ ವಿಳಾಸಕ್ಕೆ ತಮ್ಮ ಸಂಪೂರ್ಣ ವಿವರವನ್ನು ೭ ದಿನಗಳ ಒಳಗಾಗಿ ಕಳುಹಿಸಬೇಕು ಹಾಗೂ ವಾಟ್ಸಪ್ ಮುಂಖಾತರವು ಕಳುಹಿಸಬಹುದು. rk9964384325@gmail.com ಇ.ಮೆಲ್ ಕಳಿಸಿ. ವಾಟ್ಸಪ್ ನಂಬರ್. 8197655562. ಸೂಚನೆ: ಆಯ್ಕೆಯಾದ ಯುವಕರಿಗೆ ನಮ್ಮಲ್ಲಿಯೇ ತರಬೇತಿ ನೀಡಿ ಅವರಿಗೆ ತರಬೇತಿ ಪ್ರಮಾಣ ಪತ್ರವನ್ನು ನೀಡಲಾಗುವುದು. ನಮ್ಮ ಪತ್ರಿಕೆಯ ಕಡೆಯಿಂದ ಗುರುತಿನ ಚೀಟಿಯನ್ನು ನೀಡಲಾಗುವುದು. ವರದಿಗಾರರು. ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಔರಾದ ತಾಲೂಕ ಅಧ್ಯಕ್ಷರು ಧನರಾಜ ಮುಸ್ತಾಪುರೆ ಅವರ ಅಳಿಲು ಸೇವೆ ಮಾನವೀಯತೆ .ಜನಮನದಲ್ಲಿ ಶಾಶ್ವತ ಸ್ಥಾನ ಔರಾದ ಜನತೆಯಲ್ಲಿ.

Image
ಬೀದರ ನ್ಯೂಸ್.. ಇಂದು ಔರಾದ  ತಾಲೂಕಿನ ಸಂತಪುರ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕ ಸಂಚಾಲಕರಾದ ಧನರಾಜ  ಮುಸ್ತಾಪುರ್ ಅವರ ನೇತೃತ್ವದಲ್ಲಿ ನಿರ್ಗತಿಕ ಹಾಗೂ ಕಡುಬಡವರಿಗೆ ಅಕ್ಕಿ ಬೇಳೆ ಬಿಸ್ಕೆಟ್ ಅನು ವಿತರಿಸಲಾಯಿತು ಇದೆ ವೇಳೆ ಸಂತಪುರ ಠಾಣೆ psi ಗಳಾದ  ಸುವರ್ಣಾ ಮೇಡಂ. ಹಾಗು ಪೊಲೀಸ್ ಸಿಬಂದಿಗಳಾದ್ ಸುನಿಲ ಕೋರೆ. ಶೇಲೇದ್ರ ಕುಲಕರ್ಣಿ. ಪ್ರಭುಶೆಟ್ಟಿ ಸೈನಿಕಾರ್. ಕಿರಣ ಬಿರಾದಾರ್. Tm ಮಚೆ. ತುಕಾರಾಮ ಹಸನ್ಮುಖಿ. ಗಣಪತಿ ಶೆಂಬೀಳಿ. ಬಸವರಾಜ್.ಜೈಪ್ರಕಾಶ.  ಹಾಗು ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು. ವರದಿಗಾರರು. ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

ನಾಡ ಶಂಕರ್ ಕನ್ನಡ ಪರ ಹೋರಾಟಗಾರರು ಬೆಂಗಳೂರು ಬಡವರ ರಕ್ಷಣೆ ಮಾಡಿ .ಇಲ್ಲಾ ಅಂದರೆ ನಮಗೆ ಅನುಮತಿ ನೀಡಿ ಬಡವರ ರಕ್ಷಣೆ ನಾಡ ಶಂಕರ್

Image
ಬೀದರ ನ್ಯೂಸ್.. ಕರ್ನಾಟಕ ನಾಡ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷರು ನಾಡ ಶಂಕರ್ ಅವರ ಬಡವರ ಬಗ್ಗೆ ಕಾಳಜಿ ಮನದಾಳದ ಮಾತು . ಲಕ್ಷಾಂತರ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ ಸರ್ಕಾರ ಯಾರಿಗೆ  ಏನೇ ಕೊಡದಿದ್ದರೂ ಪರವಾಗಿಲ್ಲ ಹಸಿದವರಿಗೆ ಊಟವನ್ನಾದರೂ ಸರಿಯಾಗಿ ಕೊಡಿ ಇಂಥ ಪರಿಸ್ಥಿತಿಯಲ್ಲೂ ಕೆಲವರು ರಾಜಕೀಯ ತೂರುತ್ತಿರೋದು ಅಸಹ್ಯ ಅನ್ನಿಸ್ತಾ ಇದೆ  ಹಾಗೇ ಮಾನ್ಯ ಮುಖ್ಯಮಂತ್ರಿಗಳು ದಯಮಾಡಿ ಸರ್ಕಾರದ ಕೈಯಲ್ಲಿ ಆಗದಿದ್ದರೆ ಸಂಘ ಸಂಸ್ಥೆಗಳಿಗೆ ಕೊಡಿ ನಾವೆಲ್ಲ ಮುಂದೆ ನಿಂತು ಇಡೀ ಕರ್ನಾಟಕದ ಜನತೆಯನ್ನು ಸಂಪೂರ್ಣವಾಗಿ ಕಾಪಾಡ್ತೀವಿ ಹಾಗೂ ಬಡವರಿಗೆ ತಲುಪಬೇಕಾಗಿದ್ದ    ಆಹಾರ ಪದಾರ್ಥಗಳ  ಇದುವರೆಗೂ ಸಹ ಯಾರ ಮನೆ ಬಾಗಿಲಿಗೂ ಏನೂ ತಲುಪದೇ ಇರುವುದು ನಿಜವಾಗ್ಲೂ ಸರ್ಕಾರದ ನಿರ್ಲಕ್ಷ್ಯನ ಎತ್ತಿ ತೋರಿಸುತ್ತಿದೆ  ಇಲ್ಲಿ ಇದರ ಬಗ್ಗೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿರುವದು ಎದ್ದು ಕಾಣುತ್ತಿದೆ ಸರ್ಕಾರದಲ್ಲಿ ಹಣವಿಲ್ಲದಿದ್ದರೆ ದಯಮಾಡಿ ಸಾಲ ಮಾಡಿ ಜೀವ ಉಳಿಸಿ ಜೀವ ಉಳಿದರೆ ಎಲ್ಲಾ ಕಾರ್ಮಿಕರು ಹಾಗೂ ಎಲ್ಲಾ ವರ್ಗದ ಜನರು  ರೈತರು ಎಲ್ಲರೂ ಸೇರಿ ನಾವು ದುಡಿದು ಸಾಲವನ್ನು ತೀರಿಸುತ್ತೇವೆ ದಯಮಾಡಿ ದೃಢವಾದ ನಿರ್ಧಾರವನ್ನು ಮಾಡಿ ಕರ್ನಾಟಕವನ್ನು ಕರ್ನಾಟಕದ ಜನತೆಯನ್ನು ಉಳಿಸಿಕೊಡಿ ಕೆ. ನಾಡ ಶಂಕರ್ ವರದಿಗಾರರು. ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ರಾಹುಲಕ್ರಾಂತಿಕಾರಿ ಬೀ...