ಜೀಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ "ಓದಿನ ಮನೆ" ಕಾರ್ಯಕ್ರಮ ಮಾಡಿ ಬಿ ಜೆ ಪಾರ್ವತಿ ವಿ ಸೋನಾರೆ ಅಧ್ಯಕ್ಷರು ಮನವಿ ಬೀದರ ಜಿಲ್ಲೆಯ ಜನತೆಗೆ ,,

ಬೀದರ ನ್ಯೂಸ್..




ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಇಂದಿನಿಂದ ಮನೆ ಮನೆಯಲ್ಲೂ" ಓದಿನ ಮನೆ" ಕಾರ್ಯಕ್ರಮ .
ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಓದಿನ ಮನೆ ಕಾರ್ಯಕ್ರಮ ಮಾಡಿ.
ಮನೆಯಲ್ಲೇ ಇರಿ. ಮನೆಯಲ್ಲೇ ಇರಿ.ಕರೋನಾ ಮಾಹಾಮಾರಿಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳುವುದರ ಜೊತೆಗೆ ದೇಶವನ್ನು ರಕ್ಷಿಸಿ. ಇದೊಂದು ಸದಾವಕಾಶ ಎಂದು ತಿಳಿಯಿರಿ . ತುಂಬಾ ದಿವಸಗಳೇನು? ವರುಷಗಳೇ  ಕಳೆದಿವೆ.ಮನೆ ಮಂದಿಯೆಲ್ಲ ಒಂದು ಕಡೆ ಕುಳಿತು ಕೊಂಡು. ಅಜ್ಜ ಅಜ್ಜಿಯರು  ಹೇಳಿದ.  ಕಥೆಗಳನ್ನು ಕೇಳಿ .ಕಾರಣ ಸಮಯ ಸಿಗ್ತಾ ಇಲ್ಲ . ಕೆಲಸ ಕೆಲಸ ಎನ್ನುತ್ತಾ ಓಡುವ ನಾವುಗಳು ಅದೆಷ್ಟೋ ಸಲ ಅಂದುಕೊಂಡಿದ್ದೇವೆ. ಯಾವುದಾದರೂ ಜಾದು ನಡೆದು ಒಂದುವಾರ ರಜೆ ಸಿಗಬಾರದೇ? ಅಂತ. ಈಗ ಕರೋನಾ ವೈರಸ್ ನಿಯಂತ್ರಿಸುವ ಉದ್ದೇಶದಿಂದ ವಾರ ಏಕೆ ಇಪ್ಪತ್ತೊಂದು ದಿವಸ ರಜೆ ಸಿಕ್ಕಿದೆ. ಬನ್ನಿ ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ,ಕರೋನಾ ವೈರಸ್ ನಿಯಂತ್ರಿಸುವ ಈ ಕಾರ್ಯಕ್ಕೆ ಕೈ ಜೋಡಿಸೋಣ. ಅಲ್ಲದೆ ನಮ್ಮ ಮನೆ ಮಂದಿಗೆಲ್ಲ ಕಥೆ ಹೇಳೋಣ .ಕಥೆ ಕೇಳೋಣ . ಪ್ರತಿ ಮನೆಯಲ್ಲೂ "ಓದಿನ ಮನೆ" ಕಾರ್ಯಕ್ರಮ ಮಾಡುವ ಮೂಲಕ ಮಕ್ಕಳಗೆ ಸಾಹಿತ್ಯ ಓದುವುದರಲ್ಲಿ ಆಸಕ್ತಿ ಮೂಡುವಂತೆ ಮಾಡಬಹುದು.ದಿನಕ್ಕೊಂದು ಕಥೆಯನ್ನು ದಿನಕ್ಕೊಬ್ಬರಂತೆ ಓದಿ ,ಸುಮಾರು ಇಪ್ಪತ್ತೊಂದು ಕಥೆಗಳನ್ನು ಹೇಳಬಹುದಾಗಿದೆ. ಕೇಳಬಹುದಾಗಿದೆ . ಆತ್ಮೀಯರೇ ನಮ್ಮ ಮಕ್ಕಳು ಸಾಹಿತ್ಯ ಓದುತ್ತಿಲ್ಲ ಓದುತ್ತಿಲ್ಲ ಎನ್ನುವುದನ್ನು ಬಿಟ್ಟು,  ಅವರನ್ನು ಓದಿನಲ್ಲಿ ತೊಸುಗಿವುದಕ್ಕೆ ಇದೊಂದು ಉತ್ತಮ ಅವಕಾಶ ಮತ್ತು ಸಣ್ಣ ಪ್ರಯತ್ನ. ಇವತ್ತು ಮೊಟ್ಟ ಮೊದಲಿಗೆ ನಮ್ಮ ಮನೆಯಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೂಲಕ ಓದಿನ ಮನೆ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದೇವೆ."ಅವ್ವ ಹೇಳಿದ ಎಂಟು ಸುಳ್ಳುಗಳು " ಕಥೆಯನ್ನು ಡಾ.ಗ್ರಂಥಿಕಾ ಓದಿದರೆ ಖುಷಿ, ನಿಖಿಲ್ ನಿಹಾಲ್ ,ನಿಶಿಗಂಧಾ, ಚಂದ್ರಾವತಿ ,ಮಾಹಾಂತೇಶ ಡಫಳಾಪೂರ, ಜೆ .ಎನ್ ಡಫಳಾಪೂರ, ವಿಜಯಕುಮಾರ್ ಸೋನಾರೆ ಎಲ್ಲರೂ ಕಥೆಯನ್ನು ಕೇಳಿದರು. ಬನ್ನಿ ಓದಿನ ಮನೆ ಕಾರ್ಯಕ್ರಮಕ್ಕೆ ನೀವುಗಳು ಕೂಡ ನಿಮ್ಮ ನಿಮ್ಮ ಮನೆಯಲ್ಲಿ ಮಾಡುವುದರ ಮೂಲಕ ಕೈ ಜೋಡಿಸಿ.

ಬಿ ಜೆ ಪಾರ್ವತಿ ವಿ ಸೋನಾರೆ     ಓಂಕಾರ ಪಾಟಿಲ್
             ಅಧ್ಯಕ್ಷರು                 ಕಾರ್ಯದರ್ಶಿಗಳು  ಮಕ್ಕಳ ಸಾಹಿತ್ಯ ಪರಿಷತ್.           ಮಸಾಪ
          ಬೀದರ                              ಬೀದರ

ವರದಿಗಾರರು..

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
 ರಾಹುಲಕ್ರಾಂತಿಕಾರಿ
 ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .