ತವರು ಜಿಲ್ಲೆ ರಕ್ಷಣೆ ಸದಾಕಾಲವೂ ಸಿದ್ಧ ಈಶ್ವರ ಖಂಡ್ರೆ ಜನರ ಭಾವನೆ ಅರ್ಥ ಮಾಡಿಕೊಂಡು ಬಡವರ ರಕ್ಷಣೆ ದಿನಾಲು ಬಡವರ ಬಂಧು

ಬೀದರ ನ್ಯೂಸ್..


ಇಂದು ಗಡಿ ಭಾಗದ ಲಖಣಗಾಂವ, ಭಾತಂಬ್ರಾ ಸೇರಿ ನಾನಾ ಕಡೆ ಶಾಸಕ ಖಂಡ್ರೆ ಮಿಂಚಿನ ಸಂಚಾರ


ಹೊರ ರಾಜ್ಯದಿಂದ ಬಂದ ಜನರ ಮೇಲೆ ನಿಗಾ ಇಡಿ

ಭಾಲ್ಕಿ ತಾಲೂಕಿನ ಗಡಿ ಭಾಗದ ಲಖಣಗಾಂವ, ಭಾತಂಬ್ರಾ ಸೇರಿ ಮುಂತಾದ ಕಡೆಗಳಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಈಶ್ವರ ಖಂಡ್ರೆ ಮಿಂಚಿನ ಸಂಚಾರ ನಡೆಸಿ ಲಾಕ್ ಡೌನ್ ಸ್ಥಿತಿಗತಿಯ ಅವಲೋಕನ ನಡೆಸಿದರು



ಶುಕ್ರವಾರ ಬೆಳಗ್ಗೆ ಲಖಣಗಾಂವ ಚೆಕ್ ಪೋಸ್ಟ್ ಗೆ  ಭೇಟಿ ನೀಡಿದ ಶಾಸಕರು, ಗಡಿಯಾಚೆ ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್ ೧೯ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಗಡಿಯಲ್ಲಿ ಕಟ್ಟಚ್ಚೆರ ವಹಿಸುವಂತೆ ಸೂಚನೆ ನೀಡಿದರು


ಬಳಿಕ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕರು ಭೇಟಿ ನೀಡಿ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಹಣ್ಣು ವಿತರಿಸಿ, ಚಿಕಿತ್ಸೆಗೆ ಹೊರಗಿನಿಂದ ಬರುತ್ತಿರುವ ರೋಗಿಗಳ ಮಾಹಿತಿ ಪಡೆದುಕೊಂಡರು.

ಅಲ್ಲಿಂದ  ಭಾತಂಬ್ರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಖಂಡ್ರೆ ಅವರು ಭೇಟಿ ನೀಡಿ ಕೊರೊನಾ ಟೆಸ್ಟ್ ಕಿಟ್, ಔಷಧಿ ಸೇರಿದಂತೆ ವೈದ್ಯಕೀಯ ಸೇವೆಯಲ್ಲಿ ಯಾವುದೇ ಕೊರತೆ ಆಗದಂತೆ ಎಚ್ಚರ ವಹಿಸಬೇಕು ಎಂದರು.

ಹೊರ ಜಿಲ್ಲೆ, ರಾಜ್ಯದಿಂದ ಬಂದ ಜನರ ಮೇಲೆ ವೈದ್ಯರು ನಿಗಾಯಿಡಬೇಕು ಎಂದು ಶಾಸಕ ಈಶ್ವರ್ ಖಂಡ್ರೆ ತಿಳಿಸಿದರು

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಅಂಬಾದಾಸ ಕೋರೆ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ತಹಸೀಲ್ದಾರ ಅಣ್ಣಾರಾವ ಪಾಟೀಲ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ನಾಯಕರ್, ಡಿವೈಎಸ್ಪಿ ಡಾ.ದೇವರಾಜ ಬಿ, ತಾಲೂಕು ವೈದ್ಯಾಧಿಕಾರಿ ಡಾ.ಜ್ಞಾನೇಶ್ವರ ನೀರಗೂಡೆ ಸೇರಿದಂತೆ ಹಲವರು‌ ಉಪಸ್ಥಿತರಿದ್ದರು .....


ವರದಿಗಾರರು...

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .