ಬೀರಿ (ರಿ) ಆರೋಗ್ಯ ಕೇಂದ್ರಕ್ಕೆ ಈಶ್ವರ ಖಂಡ್ರೆ ಶಾಸಕರು ಭೇಟಿ ಆಶಾ ಕಾರ್ಯಕರ್ತೆಯವರಿಗೆ ದವಸ ಧಾನ್ಯ ವಿತರಣೆ

ಬೀದರ ನ್ಯೂಸ್..

ಭಾಲ್ಕಿ ಸುದ್ದಿ....



ಬೀರಿ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ  ಶಾಸಕರಾದ ಶ್ರೀ ಈಶ್ವರ್ ಖಂಡ್ರೆ ಭೇಟಿ
ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ವಿತರಣೆ
ಕೊರೊನಾ ಹೋರಾಟದಲ್ಲಿ ವೈದ್ಯರ ಸೇವೆ ಅನನ್ಯ

ಭಾಲ್ಕಿ ತಾಲೂಕಿನ ಬೀರಿ (ಬಿ) ಗ್ರಾಮಕ್ಕೆ ಶಾಸಕರಾದ  ಶ್ರೀ ಈಶ್ವರ ಖಂಡ್ರೆ ಭೇಟಿ ನೀಡಿ ಕೊರೊನಾ ಸೋಂಕು ನಿಯಂತ್ರಣದ ಕುರಿತು ಮಾಹಿತಿ ಕಲೆ ಹಾಕಿದರು. ಬೆಳಗ್ಗೆ ಬೀರಿ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕರು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿ, ಆಶಾ ಕಾರ್ಯಕರ್ತೆಯರಿಗೆ ವೈಯಕ್ತಿಕವಾಗಿ ಆಹಾರದ ಕಿಟ್ ವಿತರಿಸಿದರು.


ಬಳಿಕ ಶಾಸಕರಾದ  ಶ್ರೀ ಈಶ್ವರ್ ಖಂಡ್ರೆ ಮಾತನಾಡಿ, ಮಹಾಮಾರಿ ಕೋವಿಡ್ ೧೯ ಸೋಂಕು ಎಲ್ಲರ ನಿದ್ರೆಗೆಡಿಸಿದೆ. ಇಂತಹ ಸಂದರ್ಭದಲ್ಲಿ ವೈದ್ಯರು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಮನೆ, ಮಕ್ಕಳನ್ನು ಬಿಟ್ಟು ಕೊರೊನಾ ಹೋರಾಟದಲ್ಲಿ ತೊಡಗಿಸಿಕೊಂಡಿರುವುದು ಅವಿಸ್ಮರಣೀಯ, ಅನನ್ಯವಾಗಿದೆ ಎಂದು ಬಣ್ಣಿಸಿದರು

ಕೋವಿಡ್ ೧೯ ಸೋಂಕು ತಡೆಗೆ ಇದುವರೆಗೂ ನಿರ್ದಿಷ್ಟ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದರಿಂದ ಒಬ್ಬರಿಂದ ಮತ್ತೊಬ್ಬರಿಗೆ ತಗಲುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಹೊರ ಜಿಲ್ಲೆ, ರಾಜ್ಯಗಳಿಂದ ಬಂದ ಜನರ ಮಾಹಿತಿ ಕಲೆ ಹಾಕಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡುವಂತೆ ಸಲಹೆ ನೀಡಿದರು.





ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಥರ್ಮಾ ಸ್ಕ್ಯಾನರ, ಔಷಧಿ, ಸ್ಯಾನಿಟೈಸರ್ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಆಶಾ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿ ಕೊರೊನಾ ತಡೆಗೆ ಮುಂದಾಗಬೇಕು. ದಿನದ ೨೪ ಗಂಟೆ ದಣಿವರಿಯದ ಆಶಾ ಕಾರ್ಯಕರ್ತೆಯರ ಸೇವೆ ಗುರುತಿಸಿ ವೈಯಕ್ತಿಕವಾಗಿ ಆಹಾರದ ಕಿಟ್ ನೀಡಲಾಗುತ್ತಿದೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ  ಬಸವರಾಜ ನಾಯಕರ್, ಡಿವೈಎಸ್ಪಿ ಡಾ.ದೇವರಾಜ ಬಿ, ತಾಲೂಕು ವೈದ್ಯಾಧಿಕಾರಿ ಡಾ.ಜ್ಞಾನೇಶ್ವರ ನೀರಗೂಡೆ,ಗ್ರಾಮ ವೈದ್ಯರಾದ ಜಗದೀಶ ಖಂಡಾಳೆ,ಗ್ರಾ.ಪ.ಅಧ್ಯಕ್ಷರು ಹಾಗೂ ಗ್ರಾಮದ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.


ವರದಿಗಾರರು...

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .