ಶಾಸಕರಾದ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ತುರ್ತು ಸಭೆ.ಭಾಲ್ಕಿ ಐದು ಸಾವಿರ ಮಾಸ್ಕ್ ವಿತರಣೆ

ಬೀದರ ನ್ಯೂಸ್...

ಭಾಲ್ಕಿ ಸುದ್ದಿ:......







ಶಾಸಕರಾದ ಶ್ರೀ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ತುರ್ತು ಸಭೆ || ೫ ಸಾವಿರ ಮಾಸ್ಕ್, ೧೦೦ಲೀ ಸಾನಿಟೈಸರ್ ಖರೀದಿಗೆ ಸೂಚನೆ

ಶಂಕಿತರ ದ್ರವ ಮಾದರಿ ಪರೀಕ್ಷೆಗೆ ವಿಳಂಬ ಬೇಡ

ಭಾಲ್ಕಿ ತಾಲೂಕಿನ ವ್ಯಾಪ್ತಿಯಲ್ಲಿ ಕೋವಿಡ್ ೧೯ ತಡೆಗೆ ನಾನಾ ಹಂತದಲ್ಲಿ ಸಾಕಷ್ಟು ಮುಂಜಾಗ್ರತೆ ಕ್ರಮ ವಹಿಸಿದರ ಪರಿಣಾಮ ಇದು ವರೆಗೂ ಯಾವುದೇ ಪಾಸಿಜಿಟಿವ್ ಪ್ರಕರಣಗಳು ಕಂಡು ಬರದಿರುವುದು ಸಮಾಧಾನ ತಂದಿದೆ ಎಂದು ಶಾಸಕರಾದ ಶ್ರೀ ಈಶ್ವರ ಖಂಡ್ರೆಯವರು ಹೇಳಿದರು

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿವ ನೀರು, ಬೆಳೆಹಾನಿ ಹಾಗೂ ಕೋವಿಡ್ ೧೯ ತಡೆ ಕುರಿತು ಶುಕ್ರವಾರ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕು ಆಡಳಿತ, ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು ಸೇರಿದಂತೆ ಮುಂತಾದ ಇಲಾಖೆಗಳ ಅಧಿಕಾರಿಗಳ ಅವಿರತ ಸೇವೆಯ ಪರಿಣಾಮ ಕೋವಿಡ್ ೧೯ ನಿಯಂತ್ರಣದಲ್ಲಿದೆ.

ಆದರೂ ಕೂಡ ಕೋವಿಡ್ ೧೯ ತಡೆಗೆ ಇನ್ನು ನಿರ್ದಿಷ್ಟ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಸಾಂಕ್ರಾಮಿಕ ರೋಗ ತಕ್ಷಣಕ್ಕೆ ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣವಿಲ್ಲ. ಇದು ಸೆಪ್ಟೆಂಬರ್ ಅಂತ್ಯದ ವರೆಗೂ ಮುಂದುವರೆಯುವ ಸಾಧ್ಯತೆ ಇರುವುದರಿಂದ ಎಲ್ಲ ಅಧಿಕಾರಿಗಳು ಇನ್ನಷ್ಟು ಎಚ್ಚರಿಕೆಯಿಂದ ಕೆಲಸ ಮಾಡಿ ಯಾವೊಂದು ಪ್ರಕರಣವೂ ಪಾಸಿಟಿವ್ ಬರದಂತೆ ನೋಡಿಕೊಳ್ಳಬೇಕು. ಯಾರಲ್ಲಾದರೂ ಪ್ರಾಥಮಿಕ ಹಂತದಲ್ಲು ಕೂಡ ಕೆಮ್ಮು, ನೆಗಡಿ,ಕಫ ಕಂಡು ಬಂದರೂ ಕೂಡ ತಕ್ಷಣ ಅಂತವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದರು. ತಹಸೀಲ್ದಾರ ಅಣ್ಣಾರಾವ ಪಾಟೀಲ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ನಾಯಕರ್, ಡಿವೈಎಸ್ಪಿ ಡಾ.ದೇವರಾಜ ಬಿ ಇದ್ದರು.

೫ ಸಾವಿರ ಮಾಸ್ಕ್, ೧೦೦ಲೀ ಸಾನಿಟೈಸರ್ ಖರೀದಿಗೆ ಸೂಚನೆ

ಆಸ್ಪತ್ರೆ, ಚೆಕ್ ಪೋಸ್ಟ್ ಸೇರಿದಂತೆ ಮುಂತಾದ ಕಡೆಗಳಲ್ಲಿ ಕೊರೊನಾ ವಿರುದ್ಧ ಹೋರಾಟ ನಡೆಸಿರುವ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಸೇವೆಯಲ್ಲಿರುವ ಮುಂತಾದವರಿಗೆ ಊಟ, ಕುಡಿವ ನೀರು ಮಾಸ್ಕ್, ಸಾನಿಟೈಸರ್, ಗ್ಲೌಸ್ ಸೇರಿ ಮತ್ತಿತರ ರೀತಿಯಲ್ಲಿ ಯಾವುದೇ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು. ತಕ್ಷಣವೇ ೫ ಸಾವಿರ ಮಾಸ್ಕ್, ೧೦೦ಲೀ ಸಾನಿಟೈಸರ್, ಗ್ಲೌಸ್ ಇತ್ಯಾದಿ ಖರೀದಿ ಮಾಡುವಂತೆ ಶಾಸಕರಾದ ಶ್ರೀ ಈಶ್ವರ ಖಂಡ್ರೆಯವರು ತಹಸೀಲ್ದಾರರಿಗೆ ಸೂಚಿಸಿದರು

ಪಡಿತರ ತಲುಪಿರುವುದು ಖಾತ್ರಿಪಡಿಸಿ

ಲಾಕ್ ಡೌನ್ ಸಂದರ್ಭದಲ್ಲಿ ಬಡವರು, ವಲಸೆ ಕಾರ್ಮಿಕರು, ಬೀಕ್ಷುಕರು, ಅಲೆಮಾರಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಡಿತರ ಸೇರಿ ಇಲ್ಲದವರಿಗೂ ಈಗಾಗಲೇ ೨ ತಿಂಗಳ ಪಡಿತರ ಮುಂಗಡವಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಆದರೂ ಕೆಲವು ಕಡೆಗಳಲ್ಲಿ ಪಡಿತರ ತಲಪದಿರುವುದು, ಕಡಿಮೆ ಪಡಿತರ ನೀಡಿರುವ ಬಗ್ಗೆ ದೂರು ಬರುತ್ತಿವೆ ತಕ್ಷಣ ಅಧಿಕಾರಿಗಳು ಪರಶೀಲಿಸಿ ಪಡಿತರ ತಲುಪಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ವರದಿ ನೀಡುವಂತೆ ಶಾಸಕರು ಸೂಚನೆ ನೀಡಿದರು.

ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ ಉಚಿತ ಸಿಲಿಂಡರ್ ನೀಡಿ

ತಾಲೂಕಿನ ವ್ಯಾಪ್ತಿಯಲ್ಲಿ ಅಣ್ಣ ಅಂತ್ಯೋದಯ ಸೇರಿ ಸುಮಾರು ೬೭೭೪೨ ಕುಟುಂಬದವರು ಬಡತನ ರೇಖೆಗಿಂತ ಕೆಳಗಿದ್ದು, ಎಲ್ಲರೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ.

ಆದರೆ ಲಾಕ್ ಡೌನ್ ಸಂದರ್ಭದಲ್ಲಿ ಸರಕಾರ ಸಿಎಂ ಅನಿಲ ಭಾಗ್ಯ ಮತ್ತು ಉಜ್ವಲ ಯೋಜನೆಯಡಿ ಸೇರಿ ಕೇವಲ ೨೩೬೫೩ ಫಲಾನುಭವಿಗಳಿಗೆ ಮಾತ್ರ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುತ್ತಿದೆ.

ಉಳಿದ ಸುಮಾರು ೪೦ ಸಾವಿರ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಉಚಿತ ಸಿಲಿಂಡರ್ ನಿಂದ ವಂಚಿತರಾಗಿದ್ದು, ಸರಿಯಾದ ಕ್ರಮವಲ್ಲ ಕೂಡಲೇ ಸರಕಾರ ಬಿಪಿಎಲ್ ಕಾರ್ಡ್ ಅನಿಲ ಸಂಪರ್ಕ ಹೊಂದಿರುವ ಎಲ್ಲ ಫಲಾನುಭವಿಗಳಿಗೂ ಉಚಿತ ಸಿಲಿಂಡರ್ ನೀಡುವ ವ್ಯವಸ್ಥೆ ಮಾಡಬೇಕು ಎಂದು ಶಾಸಕರಾದ ಶ್ರೀ ಈಶ್ವರ ಖಂಡ್ರೆಯವರು ಸರಕಾರಕ್ಕೆ ಒತ್ತಾಯಿಸಿದರು

ಪಿಹೆಚ್ ಸಿಗಳಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡಿ

ಹಲಬರ್ಗಾ, ಮೇಹಕರ್, ಖಟಕ್ ಚಿಂಚೋಳಿ, ಡಾವರಗಾಂವ ಸೇರಿದಂತೆ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದ್ದು ತಕ್ಷಣ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಬೇಕು. ಕಿಸಾನ ಸಮ್ಮಾನ್ ಯೋಜನೆಯಡಿ ಎಷ್ಟು ರೈತರಿಗೆ ಹಣ ತಲುಪಿದೆ. ಲಾಕ್ ಡೌನಿಂದ ತೋಟಗಾರಿಕೆ ಬೆಳೆ ಹಾನಿ, ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಹಣ ತಲುಪಿರುವ ಮಾಹಿತಿ ನೀಡುವಂತೆ ಶಾಸಕರಾದ ಶ್ರೀ ಈಶ್ವರ ಖಂಡ್ರೆಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಡಿವ ನೀರಿಗೆ ಸ್ಪಂದಿಸಿ

ಕೋವಿಡ್ ೧೯ ನಿಯಂತ್ರಣದ ಜತೆಗೆ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಎಚ್ಚರವಹಿಸಬೇಕು.ಕರಡ್ಯಾಳ, ಧನ್ನೂರು, ಬ್ಯಾಲಹಳ್ಳಿ, ಜೈನಾಪೂರ್, ಕೇರೂರು, ಸಾಯಿಗಾಂವ ಸೇರಿ ಮುಂತಾದ ಕಡೆಗಳಲ್ಲಿ ನೀರಿನ ಸಮಸ್ಯೆ ಇರುವ ಆ ಭಾಗದ ಜನರಿಂದ ದೂರು ಬರುತ್ತಿವೆ. ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಶಾಸಕರಾದ ಶ್ರೀ ಈಶ್ವರ ಖಂಡ್ರೆಯವರು ಸೂಚನೆ ನೀಡಿದರು.


ವರದಿಗಾರರು....

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .