ಬಡವರ ರಕ್ಷಣೆ .ಪರಿಸರ ರಕ್ಷಣೆ ಕೆಪಿಸಿಸಿ ಕಾರ್ಯಧ್ಯಕ್ಷರು ಈಶ್ವರ ಬಿ ಖಂಡ್ರೆ ಶಾಸಕರು ಭಾಲ್ಕಿ

ಬೀದರ ನ್ಯೂಸ್....


ಒತ್ತಡದ ನಡುವೆ ಶಾಂತಿಧಾಮ ಆಶ್ರಮದಲ್ಲಿ ಗಿಡಕ್ಕೆ ನೀರಿಣಿಸುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ


ಭಾಲ್ಕಿ ಸದಾ ರಾಜಕೀಯ ಒತ್ತಡ, ಕ್ಷೇತ್ರದ ಜನರ ಸಮಸ್ಯೆ ಆಲಿಸುವುದರಲ್ಲಿಯೇ ಬಹುತೇಕ ಸಮಯ ಕಳೆದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕರೂ ಆಗಿರುವ ಈಶ್ವರ ಖಂಡ್ರೆ ಅವರಿಗೆ ಕೊರೊನಾ ಲಾಕ್ ಡೌನ್ ಎಫೆಕ್ಟ್ ನಿಂದ ಇದೇ ಮೊದಲ ಬಾರಿಗೆ ರಿಲ್ಯಾಕ್ಸ್ ಮೂಡನಲ್ಲಿ ಒಂದಷ್ಟು ಸಮಯ ಕಳೆಯಲು ಅವಕಾಶ ಸಿಕ್ಕಂತಾಗಿದೆ.


ಕೊರೊನಾ ಕೋವಿಡ್ 19 ವೈರಸ್‌ ಭೀತಿ ಪರಿಣಾಮ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇಂತಹ ಸಂದರ್ಭದಲ್ಲಿ ಬಹುತೇಕ ಜನಪ್ರತಿನಿಧಿಗಳು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.


ಆದರೆ, ಶಾಸಕ ಖಂಡ್ರೆ ಅವರು ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಿಸಲು ಅಧಿಕಾರಿಗಳ ಸರಣಿ ಸಭೆ ನಡೆಸುವುದರ ಜತೆಗೆ ಬಡಜನರು, ನಿರ್ಗತಿಕರು, ಅಲೆಮಾರಿ ಜನ, ಕೂಲಿಕಾರ್ಮಿಕರಿಗೆ ವೈಯಕ್ತಿಕವಾಗಿ ನೆರವಾಗುವ‌ ಮೂಲಕ ಮಾನವೀಯತೆ ಮೆರೆದಿದ್ದಾರೆ.


ಇದರೊಟ್ಟಿಗೆ ಕುಡಿವ ನೀರಿನ ಸಮಸ್ಯೆ ನೀಗಿಸಲು ಸರಕಾರದ ಅನುದಾನ ನೀರಿಕ್ಷಿಸದೇ ಸ್ವಂತ ಹಣದಿಂದ ಹಲವು ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಮುಂದಾಗಿದ್ದಾರೆ. ಇನ್ನು ಗ್ರಾಮೀಣ ಭಾಗಗಳಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಬೇಸಿಗೆ ಆರಂಭದಿಂದಲೂ ನಿರಂತರವಾಗಿ ಅಧಿಕಾರಗಳ ಸಭೆ ನಡೆಸಿ ಜನರ ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡುತ್ತ ಬಂದಿದ್ದಾರೆ ನಾವು ಕೂಲಿ ಕಾರ್ಮಿಕರಿಗೆ ಒಂದು ತಿಂಗಳು ಆಗುವಷ್ಟು ದವಸ ಧಾನ್ಯಗಳನ್ನು ನೀಡಿ ಅವರ ಹಸಿವನ್ನು ನೀಗಿಸುವ ಕೆಲಸವನ್ನು ಮಾಡಿದ್ದಾರೆ.


ಜತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷ ಬಲಪಡಿಸುವ ಹೊಣೆ ಖಂಡ್ರೆ ಮೇಲೆ ಇರುವುದರಿಂದ ಇವರಿಗೆ ವಿಶ್ರಾಂತಿ ಎನ್ನುವ ಪ್ರಶ್ನಯೇ ಇಲ್ಲ. ಇನ್ನು ಪ್ರತಿ ವರ್ಷ ನಡೆಯುವ ತಮ್ಮ ತಾಯಿ ಪುಣ್ಯ ಸ್ಮರಣೆಯಲ್ಲಿಯು ಭಾಗವಹಿಸಲು ಖಂಡ್ರೆ ಅವರಿಗೆ ಸಮಯ ಸಿಗುವುದು ಅಷ್ಟಕಷ್ಟೇ ಆದರೆ, ಇದೀಗ ಲಾಕ್ ಡೌನ್ ಆಗಿದ್ದರಿಂದ ಕ್ಷೇತ್ರದ ಜನರಗೆ ಮನೆಯಲ್ಲಿಯೇ ಸಮಯ ಕಳೆಯುಂತೆ ಸ್ವತಃ ಖಂಡ್ರೆ ಅವರು ಮನವಿ ಮಾಡಿರುವುದರಿಂದ ಜನರ ಭೇಟಿ ಒಂದಷ್ಟು ಕಡಿಮೆ ಆಗಿದೆ. ಆದರೂ ಕೂಡ ಜನರಿಂದ ಶಾಸಕರ ಭೇಟಿ ನಿಂತಿಲ್ಲ.


ಕೆಲವು‌ ಜನಪ್ರತಿನಿಧಿಗಳು ಹೆಂಡತಿ ಮಕ್ಕಳೊಂದಿಗೆ ಕಾಲ ಕಳೆಯುವುದು ವಿಶ್ರಾಂತಿ ಎಂದು ಕೊಂಡಿದ್ದಾರೆ.ಆದರೆ, ಶಾಸಕ ಖಂಡ್ರೆ ಅವರು ಇವರಿಂದ ವಿಭಿನ್ನವಾಗಿ ನಿಲ್ಲುತ್ತಾರೆ

ಇದೇ ಮೊದಲ ಬಾರಿಗೆ ಒಂದಷ್ಟು ಸಮಯ ಬಿಡುವು ಮಾಡಿಕೊಂಡು ಖಂಡ್ರೆ ಅವರು ತಮ್ಮ ತಾಯಿಯ ಸಮಾಧಿ ಸ್ಥಳವಾದ ಚಿಕಲಚಂದಾ ರಸ್ತೆಯ ಶಾಂತಿಧಾಮಕ್ಕೆ ಖಂಡ್ರೆ ಅವರು ಭೇಟಿ ನೀಡಿ ಗಿಡಗಳಿಗೆ ಸ್ವತಹ ಒಂದಷ್ಟು ಸಮಯ ನೀರುಣಿಸಿ ರಿಲ್ಯಾಕ್ಸ್ ಮೂಡಿಗೆ ಜಾರುವ ಜತೆಗೆ ಪರಿಸರ ಪ್ರೇಮ ಮೆರೆದು ಎಲ್ಲರ ಗಮನ ಸೆಳೆದಿರುವುದಂತು ಸುಳ್ಳಲ್ಲ.


ವರದಿಗಾರರು...


ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .